ಸೆಮಿಕಂಡಕ್ಟರ್‌ ಉತ್ಪಾದನಾ ಘಟಕ ನಿರ್ಮಾಣ: ಗುಜರಾತ್‌, ಚಂಡೀಗಢಕ್ಕೆ ತೈವಾನ್‌ ನಿಯೋಗದ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಂಭಾವ್ಯ ತಾಣಗಳನ್ನು ಗುರುತಿಸುವ ಸಲುವಾಗಿ ತೈವಾನ್‌ನ ಸೆಮಿಕಂಡಕ್ಟರ್ ತಯಾರಕರ ನಿಯೋಗವು ಈ ವಾರ ಚಂಡೀಗಢ ಮತ್ತು ಗುಜರಾತ್‌ಗೆ ಭೇಟಿ ನೀಡಿದೆ ಎಂದು ಕೆಲ ಉನ್ನತ ಮೂಲಗಳು ವರದಿ ಮಾಡಿವೆ.

ತೈವಾನ್ ಅಧಿಕಾರಿಗಳ ನೇತೃತ್ವದ ತಂಡವು ಗುಜರಾತ್‌ನ ಧೋಲೇರಾ ಸ್ಮಾರ್ಟ್ ಸಿಟಿ ಮತ್ತು ಮೊಹಾಲಿಯಲ್ಲಿರುವ ಸೆಮಿ ಕಂಡಕ್ಟರ್ ಲ್ಯಾಬೊರೇಟರಿ (ಎಸ್‌ಸಿಎಲ್) ಗೆ ಭೇಟಿನೀಡಿದೆ. ತಂಡವು ಭಾರತೀಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದು ಕಳೆದ ಡಿಸೆಂಬರ್‌ನಲ್ಲಿ ಭಾರತ ಸರ್ಕಾರದ ಸೆಮಿಕಂಡಕ್ಟರ್ ಮಿಷನ್ ಕುರಿತು ಸದಸ್ಯರಿಗೆ ವಿವರಿಸಲಾಗಿದೆ. ಈ ಮಿಷನ್ ₹ 76,000 ಕೋಟಿ‌ ರೂ. ಮೌಲ್ಯದ ಉತ್ಪಾದನೆ ಆಧರಿತ ಉತ್ತೇಜನದ (ಪಿಎಲ್‌ಐ) ಅಥವಾ ಸಂಪೂರ್ಣ ಪೂರೈಕೆ ಸರಪಳಿಗೆ ಸುಮಾರು $ 10 ಶತಕೋಟಿ ರೂ.ಗಳನ್ನು ಕಲ್ಪಿಸುತ್ತದೆ.

ನಿಯೋಗದ ಭೇಟಿಯ ಬಗ್ಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾತುಗಳು ಇದುವರೆಗೂ ಹೊರಬಿದ್ದಿಲ್ಲ. ದೇಶದ ಕಾನೂನುಗಳಿಗೆ ಅನುಗುಣವಾಗಿ ಎಲ್ಲಾ ವಿದೇಶಿ ಹೂಡಿಕೆಗಳನ್ನು ನವದೆಹಲಿ ಸ್ವಾಗತಿಸುತ್ತದೆ ಮತ್ತು ತೈವಾನ್ ಇದಕ್ಕೆ ಹೊರತಾಗಿಲ್ಲ ಎಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮೂಲಗಳು ಉಲ್ಲೇಖಿಸಿವೆ.

ಭಾರತವು ತೈವಾನ್‌ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿದೆ ಮತ್ತು ಉದಾಹರಣೆಗೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣೆಯಲ್ಲಿ ಸಹಕಾರಕ್ಕಾಗಿ ಕೃಷಿ ಸಚಿವಾಲಯ ಮತ್ತು ತೈವಾನ್‌ನ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ ಹಾಗೂ ಭಾರತದ ನಡುವೆ ತಿಳುವಳಿಕೆ ಪತ್ರ (MoU) ಇದೆ. ಇನ್ನು ಜಾಗತಿಕ ಸೆಮಿಕಂಡಕ್ಟರ್‌ ಪೂರೈಕೆ ಸರಪಳಿಯಲ್ಲಿ ತೈವಾನ್‌ ನಿರ್ಣಾಯಕ ಪಾತ್ರ ಹೊಂದಿದೆ. ಆದ್ದರಿಂದ ಈ ಭೇಟಿಯು ಭಾರತದ ಸೆಮಿಕಂಡಕ್ಟರ್‌ ಉತ್ಪಾದನೆಯ ಗುರಿಗೆ ಪೂರಕವಾಗಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!