ಸಮುದ್ರದ ಆಳದಲ್ಲಿ ಕೆಟ್ಟು ಹೋದ ರೈಲು: ಉಸಿರು ಬಿಗಿಹಿಡಿದು ನಿಂತ ಪ್ರಯಾಣಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫ್ರಾನ್ಸ್‌ನ ಕ್ಯಾಲೈಸ್‌ನಿಂದ ಇಂಗ್ಲೆಂಡ್‌ನ ಫೋಕ್‌ಸ್ಟೋನ್‌ಗೆ ಹೋಗುತ್ತಿದ್ದ ರೈಲು ಇದ್ದಕ್ಕಿದ್ದಂತೆ ಸಮುದ್ರದ 246 ಅಡಿ ಆಳದ ಸುರಂಗದಲ್ಲಿ ನಿಂತುಬಿಟ್ಟಿತ್ತು.  ಏನಾಯಿತು ಎಂದು ತಿಳಿಯದೆ ಪ್ರಯಾಣಿಕರು ಒಮ್ಮೆಲೆ ಗಾಬರಿಯಾದರು, ಹೀಗೆ ಒಂದಲ್ಲ ಎರಡಲ್ಲ ಐದಾರು ಗಂಟೆ ಜೀವ ಭಯದಲ್ಲೇ ಕಾಲ ಕಳೆಯುವಂತಾಯಿತು. ಮಂಗಳವಾರ (ಆಗಸ್ಟ್ 2022) ಮಧ್ಯಾಹ್ನ 3.50 ರ ಸುಮಾರಿಗೆ ಘಟನೆ ನಡೆದಿದೆ. ಬದುಕುಳಿದ ಪ್ರಯಾಣಿಕರಿಗೆ ಐದು ಗಂಟೆಗಳ ಕಾಲ ಡಿಸಾಸ್ಟರ್‌ ಸಿನಿಮಾ ಓಡಿದ ಅನುಭವ ಆಯಿತು ಎಂದಿದ್ದಾರೆ.

ಯೂರೋಟನಲ್ ಲೇ ಶಟಲ್ ಸರ್ವಿಸ್ ಟ್ರೈನ್ ಅಲಾರಂಗಳು ಇದ್ದಕ್ಕಿದ್ದಂತೆ ಆಫ್ ಆದ ಕೂಡಲೇ ರೈಲು ನಿಂತು ಬಿಟ್ಟಿದೆ. ಬುಧವಾರ ಬೆಳಿಗ್ಗೆ ಸೇವೆಗಳು ಸಹಜ ಸ್ಥಿತಿಗೆ ಮರಳಿವೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ರೈಲಿನ ಅಲಾರಾಂ ಬಾರಿಸಿದ್ದರಿಂದ ರೈಲು ನಿಂತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಇದೊಂದು ಅಸಾಧಾರಣ ಘಟನೆಯಾಗಿದ್ದು, ನಂತರ ರೈಲನ್ನು ನಿಧಾನವಾಗಿ ಸುರಂಗದಿಂದ ಹೊರತರಲಾಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಬರ್ಮಿಂಗ್ಹ್ಯಾಮ್‌ನ 37 ವರ್ಷದ ಪ್ರಯಾಣಿಕ ಸಾರಾ ಫೆಲೋಸ್, ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಏನಾಗುತ್ತಿದೆ ಎಂಬುದೇ ತಿಳಿಯದೇ ಭಯಗೊಂಡಿದ್ದೆವು, ಕೆಲವರಂತೂ ಇಲ್ಲಿಂದ ಬದುಕಿ ಹೋಗುತ್ತೇವಾ? ಎನ್ನುವಷ್ಟರ ಮಟ್ಟಿಗೆ ಹೆದರಿದ್ರು. ಸಮುದ್ರದ ಸುರಂಗದಲ್ಲಿ ಸಿಲುಕಿರುವ ಪ್ರಯಾಣಿಕರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!