Wednesday, November 29, 2023

Latest Posts

HEALTH| ಎಳನೀರಿನೊಂದಿಗೆ ಈ ಕಾಳು ಬಳಸಿ, ಆರೋಗ್ಯ ಇನ್ನಷ್ಟು ಉತ್ತಮವಾಗಿರುತ್ತದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನೇಕ ಮಂದಿಗೆ ಸ್ಥೂಲಕಾಯ ಅತಿದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಜೀವನ ಶೈಲಿಯಲ್ಲಿ ಆದ ಬಹುದೊಡ್ಡ ಬದಲಾವಣೆ ದೇಹಾರೋಗ್ಯಕ್ಕೆ ತೊಂದರೆ ನೀಡುತ್ತಿರುವುದು ಸಾಮಾನ್ಯವಾಗಿದೆ.

ದೇಹದ ತೂಕವನ್ನು ಸರಿದೂಗಿಸದಿದ್ದರೆ ಅದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಲ್ಲದು. ಸ್ಥೂಲ ಕಾಯವಷ್ಟೇ ಅಲ್ಲ ಅತಿಯಾದ ತೂಕವೂ ವಿವಿಧ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ದೇಹಕ್ಕೆ ಸರಿಯಾದ ವ್ಯಾಯಾಮ ಸಿಗದೆ, ಚಟುವಟಿಕೆ ರಹಿತವಾಗಿರುವುದು ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.

ನಾವು ಸೇವಿಸುವ ಆಹಾರದ ಜೊತೆಗೆ ನಾವು ಸೇವಿಸುವ ಪಾನೀಯಗಳು ಉತ್ತಮ ಆಗಿದ್ದರೆ, ನಮ್ಮ ಆರೋಗ್ಯವೂ ಉತ್ತಮವಾಗಿರಲು ಸಾಧ್ಯವಿದೆ. ದಿನಂಪ್ರತಿ ಎಳನೀರು ಬಳಸುವುದರಿಂದ ದೇಹದ ಆರೋಗ್ಯ ವೃದ್ಧಿಯಾಗುತ್ತದೆ.

ಎಳನೀರಿನೊಂದಿಗೆ ಸಬ್ಜ ಕಾಳು(ಕಾಮಕಸ್ತೂರಿ ಬೀಜ) ನೆನೆಹಾಕಿ ಸೇವಿಸಿದರೆ ದೇಹವನ್ನು ಅತ್ಯುತ್ತಮವಾಗಿ ಕಾಪಾಡಲು ಸಹಕಾರಿಯಾಗುತ್ತೆ. ಎಳೆನೀರಿನಲ್ಲಿ ಹೇರಳವಾದ ಕಾರ್ಬೋಹೈಡ್ರೇಟ್ ಅಂಶಗಳಿವೆ. ಎಲೆಕ್ಟ್ರೋಲೈಟ್, ವಿಟಮಿನ್ ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶ ಒಳಗೊಂಡಿದೆ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!