ಹೈಕಮಾಂಡ್ ಸೂಚಿಸಿದರೆ ಮಾತ್ರ ಲೋಕಸಭೆಗೆ ಸ್ಪರ್ಧೆ: ಶೆಟ್ಟರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಾನು ಯಾವ ಲೋಕಸಭೆ ಕ್ಷೇತ್ರದ ಮೇಲೂ ಕಣ್ಣಿಟ್ಟಿಲ್ಲ. ಅಕಸ್ಮಾತ್ ಸ್ಪರ್ಧೆ ಮಾಡು ಅಂತ ಸೂಚಿಸಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದರು. ಬಿಜೆಪಿಗೆ ಮರಳಿ ಸೇರ್ಪಡೆಯಾದ ನಂತರ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಶೆಟ್ಟರ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮೂರು ನಾಲ್ಕು ತಿಂಗಳಿಂದ ನಾನು ಪ್ರವಾಸ ಮಾಡಿದಾಗ ಅನೇಕರು ಬಿಜೆಪಿಗೆ ವಾಪಸ್ ಬರಬೇಕು ಅಂತ ಸಲಹೆ ನೀಡುತ್ತಿದ್ದರು. ಎಲ್ಲಿ ಪ್ರವಾಸ ಮಾಡಿದರೂ ನಮಗೆ ಒತ್ತಡ ಬರುತ್ತಿತ್ತು. ಹಿರಿಯರಾಗಿ ಮನೆಗೆ ಬರಬೇಕು ಎಂದು ಹೇಳುತ್ತಿದ್ದರು. ಮುಂದೆ ವಿಜಯೇಂದ್ರ ಅಧ್ಯಕ್ಷರಾದ ಮೇಲೆ ನನ್ನ ಜೊತೆ ಮಾತನಾಡಿದ್ದರು ಎಂದರು.

ರಾಷ್ಟ್ರೀಯ ನಾಯಕರು ಮನಸು ಮಾಡಿದ ಮೇಲೆ ನಾನು ದೆಹಲಿಗೆ ಹೋಗಿದ್ದೆ. ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ಭೇಟಿಯಾದಾಗ ಹಿಂದೆ ಆಗಿರೋದನ್ನು ಮರೆತು ಬಿಡಿ ಎಂದಿದ್ದರು. ನಿಮಗೆ ಗೌರವ ಕೊಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದರು.

ತುಮಕೂರ, ದಾವಣಗೇರಿಯಲ್ಲಿ ನನಗೆ ಸ್ವಾಗತ ಮಾಡಿದರು. ಎಲ್ಲ ಕಡೆ ಕಾರ್ಯಕರ್ತರು ಪ್ರೀತಿ ತೋರಿದರು. ಹಾವೇರಿ ಜಿಲ್ಲೆಯಲ್ಲಿ ಅನೇಕರು ನಮಗೆ ಏನೋ ಒಂದು ಕಳೆದುಕೊಂಡ ಹಾಗೆ ಆಗಿತ್ತು. ನೀವು ಬಂದಿರೋದು ಖುಷಿಯಾಯ್ತು ಎಂದರು. ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದರು. ಮುನೇನಕೊಪ್ಪ ಕೂಡಾ ಜೊತೆಗಿದ್ದರು. ಅನೇಕ ಕಾರ್ಯಕರ್ತರು ಸ್ವಾಗತ ಮಾಡಿಕೊಂಡರು ಎಂದರು.

ಜಿಲ್ಲೆಯಲ್ಲಿ ಯಾವ ಬಣ ಇಲ್ಲ, ಜೋಶಿ ಬಣ ಇಲ್ಲ,ಶೆಟ್ಟರ್ ಬಣ ಇಲ್ಲ. ಬಿಜೆಪಿಯೊಂದೇ ಬಣ. ನನ್ನನ್ನು ಪಕ್ಷದ ಕಚೇರಿಕೆ ಕರೆದಿದ್ದಾರೆ. ನಾನು ಪಕ್ಷದ ಕಚೇರಿಗೆ ಹೋಗುತ್ತೇನೆ. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಇದೆಲ್ಲವೂ ಆಗಿದ್ದು, ಯಡಿಯೂರಪ್ಪ ಮಾರ್ಗದರ್ಶನ ಇದರಲ್ಲಿ ಆಗಿದೆ ಎಂದರು.

ಕಚೇರಿಗೆ ಶೆಟ್ಟರ್ ಸ್ವಾಗತಿಸಿದ ಮುಖಂಡರು
ಪಕ್ಷ ಸೇರಿದ ಬಳಿಕ‌ ಮೊದಲ‌ ಬಾರಿ ನಗರದ ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಶೆಟ್ಟರ್ ಅವರಿಗೆ ಕಾರ್ಯಕರ್ತರು ಸ್ವಾಗತ ಕೋರಿದರು. ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ, ಶಾಸಕ ಮಹೇಶ ಟೆಂಗಿನಕಾಯಿ ಮತ್ತಿತರರು ಸ್ವಾಗತಕೊರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!