ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ಇಲ್ಲದೆ ವಿದೇಶದಲ್ಲಿ ಚೆಸ್ ಟೂರ್ನಿಯಲ್ಲಿ ಸ್ಪರ್ಧಿಸಿದ ಆಟಗಾರ್ತಿಗೆ ಇರಾನ್ ಮತ್ತೆ ದೇಶಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದೆ.
ಕಜಕಿಸ್ತಾನದ ಅಲ್ಮಾಟಿಯಲ್ಲಿ ವಲ್ಡ್ ರ್ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್ಶಿಪ್ ನಡೆದಿತ್ತು. ಈ ಸ್ಪರ್ಧೆಗಳಲ್ಲಿ ಚೆಸ್ ಆಟಗಾರ್ತಿ ಸಾರಾ ಖಡೆಮ್ ಸ್ಪರ್ಧಿಸಿದ್ದರು. ಹಿಜಾಬ್ ಧರಿಸದೇ ಇದ್ದ ಕಾರಣ ಇರಾನ್ಗೆ ಹಿಂದಿರುಗಬೇಡ ಎಂದು ಎಚ್ಚರಿಕೆ ನೀಡಲಾಗಿದೆ.
ಇರಾನ್ನಲ್ಲಿ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಇದೆ, ಅದರಲ್ಲಿ ಹಿಜಾಬ್ ಕಡ್ಡಾಯ. ಹಿಜಾಬ್ ಇಲ್ಲದೆ ಸ್ಪರ್ಧಿಸಿದ ಕಾರಣ ಇರಾನ್ ಎಚ್ಚರಿಕೆ ನೀಡಿದ್ದು ಸಾರಾ ಸ್ಪೇನ್ಗೆ ತೆರಳಿದ್ದಾರೆ.
ಸಾರಾ ಅವರಿಗೆ ಸ್ಪರ್ಧೆ ನಂತರ ಸಾಕಷ್ಟು ಮಂದಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಸಾರಾ ಪೋಷಕರು, ಸಂಬಂಧಿಕರಿಗೂ ಜೀವ ಬೆದರಿಕೆ ಕರೆಗಳು ಬಂದಿವೆ.