ಸೂಡಾನ್ ನಲ್ಲಿ ಮುಂದುವರಿದ ಹಿಂಸಾಚಾರ: ಮನೆಯಿಂದ ಹೊರಬರದಂತೆ ಭಾರತೀಯ ರಾಯಭಾರ ಕಚೇರಿ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಡಾನ್ ರಾಜಧಾನಿ ಖಾರ್ಟೌಮ್‌ನಲ್ಲಿ ಹಿಂಸಾಚಾರ ಮುಂದುವರೆದಿದ್ದು, ಈ ಹಿನ್ನೆಲೆ ಭಾರತೀಯ ರಾಯಭಾರ ಕಚೇರಿಯು ಭಾರತೀಯರು ತಮ್ಮ ನಿವಾಸಗಳಿಂದ ಹೊರಬರದಂತೆ ಸಲಹೆಯನ್ನು ನೀಡಿದೆ.

ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಯಭಾರ ಕಚೇರಿ “ಸೂಡಾನ್ ನಲ್ಲಿ ಲೂಟಿ ಮಾಡುತ್ತಿರುವ ಅನೇಕ ಪ್ರಸಂಗಗಳನ್ನು ಗಮನಿಸಿದ್ದೇವೆ.ಎಲ್ಲಾ ಭಾರತೀಯ ಪ್ರಜೆಗಳು ದಯವಿಟ್ಟು ಹೊರಗೆ ಹೋಗದಂತೆ ಸೂಚಿಸಲಾಗಿದೆ. ದಯವಿಟ್ಟು ನಿಮ್ಮ ರೇಷನ್ ಸಂಗ್ರಹಿಸಿಟ್ಟುಕೊಳ್ಳಿ. ಪರಿಸ್ಥಿತಿಯು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯಬಹುದು. ದಯವಿಟ್ಟು ಪ್ರಯತ್ನಿಸಿ ನಿಮ್ಮ ನೆರೆಹೊರೆಯವರ ಸಹಾಯವನ್ನು ತೆಗೆದುಕೊಳ್ಳಿ. ದಯವಿಟ್ಟು ಮನೆಯಲ್ಲಿಯೇ ಇರಿ ಮತ್ತು ಸುರಕ್ಷಿತವಾಗಿರಿ’ ಎಂದಿದೆ.

ಸುಡಾನ್‌ನಲ್ಲಿ ಕರ್ನಾಟಕ ರಾಜ್ಯದ ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗದ 31 ಜನರನ್ನು ಸಿಲುಕಿದ್ದು, ಅವರ ಕರೆ ತರುವ ಪ್ರಯತ್ನಗಳು ಕೂಡ ನಡೆಯುತ್ತಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಡಾನ್‌ನಲ್ಲಿ ವಾಸಿಸುವ ಭಾರತೀಯರ ಸಂಖ್ಯೆ ಸುಮಾರು 4,000 ರಷ್ಟಿದೆ, ಅವರಲ್ಲಿ 1,200 ಮಂದಿ ದಶಕಗಳ ಹಿಂದೆಯೇ ಸೂಡಾನ್ ದೇಶದಲ್ಲಿ ನೆಲೆಸಿದ್ದಾರೆ.
ಉಭಯ ಪಕ್ಷಗಳ ನಡುವಿನ ಕದನದಲ್ಲಿ ಇದುವರೆಗೆ ಕನಿಷ್ಠ 185 ಜನರು ಸಾವನ್ನಪ್ಪಿದ್ದಾರೆ ಮತ್ತು 1,800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!