ಕ್ರಿಮಿನಲ್ಸ್, ಮಾಫಿಯಾ, ಗ್ಯಾಂಗ್‌ಸ್ಟರ್ಸ್ ಬೆದರಿಕೆ ಹಾಕಿದರೆ ಅಷ್ಟೇ: ವಾರ್ನಿಂಗ್ ಕೊಟ್ಟ ಯುಪಿ ಸಿಎಂ ಯೋಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಹಾಗೂ ಸಹೋದರ ಅಶ್ರಫ್ ಹತ್ಯೆಯಾದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಮಾತನಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಾಫಿಯಾ, ಗ್ಯಾಂಗ್‌ಸ್ಟರ್ಸ್, ಕ್ರಿಮಿನಲ್ಸ್ ಸಂಪೂರ್ಣವಾಗಿ ಮಟ್ಟಹಾಕುವುದಾಗಿ ಈಗಾಗಲೇ ಯೋಗಿ ಭರವಸೆ ನೀಡಿದ್ದಾರೆ. ಇದರಂತೆ ಉಮೇಶ್ ಪಾಲ್ ಕೊಲೆ ಪ್ರಕರಣದ ಪ್ರಮುಖ 8 ಆರೋಪಿಗಳ ಪೈಕಿ ಈಗಾಗಲೇ 6 ಮಂದಿಯನ್ನು ಎನ್‌ಕೌಂಟರ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಮತ್ತೊಂದು ಎಚ್ಚರಿಕೆ ನೀಡಿದೆ.

ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ಸ್, ಗ್ಯಾಂಗ್‌ಸ್ಟರ್ಸ್, ಮಾಫಿಯಾ ಡಾನ್ ಯಾರೊಬ್ಬರಿಗೆ ಬೆದರಿಕೆ ಹಾಕಿದರೆ ಕತೆ ಮುಗಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಾಫಿಯಾ, ಗ್ಯಾಂಗ್‌ಸ್ಟರ್ಸ್, ಕ್ರಿಮಿನಲ್ಸ್ ಮಟ್ಟಹಾಕಲು ಎಲ್ಲಾ ಕ್ರಮಕೈಗೊಳ್ಳಲಾಗಿದೆ. ಎನ್‌ಕೌಂಟರ್ ಮೂಲಕವೇ ಮಾಫಿಯಾ ಕತೆ ಮುಗಿಸಿದ್ದೇವೆ. ಇದರ ಹೊರತಾಗಿ ಯಾರಾದರೂ ಕ್ರಿಮಿನಲ್ಸ್, ಮಾಫಿಯಾ ಡಾನ್‌ಗಳು, ಗ್ಯಾಂಗ್‌ಸ್ಟರ್ಸ್ ಬೆದರಿಕೆ ಹಾಕುವುದು, ವಸೂಲಿ ಮಾಡುವುದು, ದರೋಡೆ ಮಾಡಲು ಇಳಿದರೆ ಅಷ್ಟೇ ಎಂದು ವಾರ್ನಿಂಗ್ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣಣವಾಗಿ ಸುಧಾರಿಸಿದೆ. 2017ರಕ್ಕಿಂತ ಮೊದಲು ಯುಪಿಯಲ್ಲಿನ ಪರಿಸ್ಥಿತಿ ಊಹಿಸಿಕೊಳ್ಳಿ. ಈಗ ಹೇಗೆದೆ ಅನ್ನೋದನ್ನು ದಾಖಲೆ, ಅಂಕಿ ಅಂಶಗಳ ಮೂಲಕ ಪರಿಶೀಲಿಸಿದರೆ ಎಲ್ಲವೂ ಅರಿವಾಗುತ್ತದೆ ಎಂದಿದ್ದಾರೆ. 2017ರಿಂದ 2023ರ ವರೆಗೆ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆಗೆ ಅವಕಾಶ ನೀಡಿಲ್ಲ. ಕರ್ಫ್ಯೂ ಹೇರಿಲ್ಲ. ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮಾಡುವ ಕಾಲ ಈಗ ಬದಲಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!