EYE CARE | ಕಂಟಿನ್ಯುಯಸ್‌ ಆಗಿ ಸಿಸ್ಟಮ್‌ ನೋಡಿ ಕಣ್ಣು ಉರೀನಾ? ಈ ಟಿಪ್ಸ್‌ ಫಾಲೋ ಮಾಡಿ

ಇಂದು ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳು ಜೀವನದ ಒಂದು ಭಾಗವಾಗಿಬಿಟ್ಟಿವೆ. ಕೆಲವು ಜನರ ಉದ್ಯೋಗಗಳು ಕಂಪ್ಯೂಟರ್​ಗಳ ಮೇಲೆ ಅವಲಂಬಿತವಾಗಿವೆ. ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವವರು ಪಿಸಿಗಳ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಡಿಜಿಟಲ್ ಸ್ಕ್ರೀನ್​ಗಳನ್ನು ದೀರ್ಘಕಾಲ ನೋಡುವುದರಿಂದ ಕಣ್ಣುಗಳಿಗೆ ಹೆಚ್ಚು ಆಯಾಸವಾಗುತ್ತದೆ. ಕೆಲವೊಮ್ಮೆ ಇವುಗಳನ್ನು ನೋಡುವುದರಿಂದಲೂ ನೋವಾಗಬಹುದು. ಇದನ್ನು ಕಡಿಮೆ ಮಾಡೋಕೆ  ಇಲ್ಲಿದೆ ಟಿಪ್ಸ್‌..

ಡಿಸ್​ಪ್ಲೇನಲ್ಲಿರುವ ಆ್ಯಂಟಿ-ಗ್ಲೇರ್ ಸ್ಕ್ರೀನ್​ ಪರದೆಯು ಕಣ್ಣಿಗೆ ಆರಾಮದಾಯಕವಾಗಿದೆ. ನೀವು ಕನ್ನಡಕವನ್ನು ಧರಿಸಿದರೆ, ಪ್ರತಿಫಲಿತ ವಿರೋಧಿ ಲೇಪನವಿರುವ ಕನ್ನಡಕವನ್ನು ಆಯ್ಕೆ ಮಾಡಿಕೊಳ್ಳಿ. ಇದು ಪರದೆಯಿಂದ ಪ್ರತಿಫಲಿಸುವ ಬೆಳಕು ಕಣ್ಣಿಗೆ ಹೆಚ್ಚು ತಲುಪುವುದನ್ನು ತಡೆಯುತ್ತದೆ.

ಕೆಲಸದಿಂದ ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಿ. ಪ್ರತಿ ಗಂಟೆಗೆ ಕನಿಷ್ಠ 10 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು. ಇದು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಕುತ್ತಿಗೆ, ಬೆನ್ನು ಮತ್ತು ಭುಜದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

10ರಿಂದ 15 ಸೆಕೆಂಡುಗಳ ಕಾಲ ದೂರದ ವಸ್ತುಗಳನ್ನು ನೋಡಿ, ನಂತರ ತಕ್ಷಣ 10 ರಿಂದ 15 ಸೆಕೆಂಡುಗಳ ಕಾಲ ಹತ್ತಿರದ ವಸ್ತುಗಳ ಮೇಲೆ ಗಮನಹರಿಸಿ. ಇದನ್ನು ಹತ್ತು ಬಾರಿ ಮಾಡಿ. ಇದು ಪರದೆಗಳನ್ನು ನೋಡುವಾಗ ಬಿಗಿಯಾಗುವ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ .

ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮಿಟುಕಿಸಿ. ನಿಮ್ಮ ಕಣ್ಣುಗಳು ಒಣಗದಂತೆ ಮತ್ತು ಕಿರಿಕಿರಿಗೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ನಿಮ್ಮ ಕಣ್ಣುಗಳು ಕಿರಿಕಿರಿಗೊಂಡರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಕೃತಕ ಕಣ್ಣೀರಿನ ಹನಿಗಳು ಪರಿಹಾರ ನೀಡುತ್ತವೆ. ಪ್ರತಿ 20 ನಿಮಿಷಗಳಿಗೊಮ್ಮೆ ನಿಮ್ಮ ಕಣ್ಣುರೆಪ್ಪೆಗಳನ್ನು ನಿಧಾನವಾಗಿ 10 ಬಾರಿ ಮಿಟಿಕಿಸಬೇಕು. ನೀವು ಮಲಗಿರುವಾಗ ನಿಮ್ಮ ಕಣ್ಣುಗಳನ್ನು ಮಿಟಿಕಿಸಿದರೆ ಉತ್ತಮ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!