Sleep Well | ನೈಟ್ ಟೈಮ್ ನಿದ್ರೆ ಬರ್ತಿಲ್ವಾ? ನೋ ಟೆನ್ಶನ್ ಈ ಟಿಪ್ಸ್ ಟ್ರೈ ಮಾಡಿ ನಿದ್ರೆ ಪಕ್ಕಾ ಬರುತ್ತೆ!

ರಾತ್ರಿ ಚೆನ್ನಾಗಿ ನಿದ್ರೆ ಬರಲು ಕೆಲವು ಆಹಾರಗಳ ಸೇವನೆ ಮಾಡಿ, ಇಲ್ಲಿದೆ ಮಾಹಿತಿ:

ಬೆಚ್ಚಗಿನ ಹಾಲು: ಬೆಚ್ಚಗಿನ ಹಾಲು ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಇದರಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೊ ಆಮ್ಲವಿದ್ದು, ಇದು ನಿದ್ರೆಗೆ ಸಹಕಾರಿಯಾದ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದ್ದು, ಇದು ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ರೆಗೆ ಸಹಾಯ ಮಾಡುತ್ತದೆ.

ಬಾದಾಮಿ: ಬಾದಾಮಿಯಲ್ಲಿ ಮೆಗ್ನೀಸಿಯಮ್ ಮತ್ತು ಮೆಲಟೋನಿನ್ ಇದ್ದು, ಇದು ನಿದ್ರೆಗೆ ಸಹಾಯ ಮಾಡುತ್ತದೆ.

ಚೆರ್ರಿ ಹಣ್ಣುಗಳು: ಚೆರ್ರಿ ಹಣ್ಣುಗಳು ಮೆಲಟೋನಿನ್ ಅನ್ನು ಹೊಂದಿರುತ್ತದೆ, ಇದು ನಿದ್ರೆಗೆ ಸಹಾಯಮಾಡುವ ಹಾರ್ಮೋನ್ ಆಗಿದೆ.

ಜೀರಿಗೆ ನೀರು: ಜೀರಿಗೆ ನೀರು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ನಿದ್ದೆಗೆ ತೊಂದರೆ ಆಗುವುದಿಲ್ಲ. ಇದಲ್ಲದೆ, ರಾತ್ರಿ ಮಲಗುವ ಮುನ್ನ ಜಾಸ್ತಿ ಊಟ ಮಾಡುವುದನ್ನು ತಪ್ಪಿಸಿ. ಲಘು ಆಹಾರ ಸೇವಿಸಿ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!