ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಅರೆಸ್ಟ್ ಕೇಸ್‌ಗೆ ಸಂಬಂಧಪಟ್ಟಂತೆ ನಿರ್ಮಾಪಕ ಉಮಾಪತಿ ಗೌಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಟ ದರ್ಶನ್ ಅವರು ಜೊತೆಗಿರುವವರನ್ನ ಒಂದಲ್ಲ ಒಂದು ದಿನ ತೊಂದ್ರೆ ಸಿಕ್ಕಿ ಹಾಕಿಸ್ತಾರೆ ಅಂತ ಗೊತ್ತಿತ್ತು. ಬಂಡೆ ಕೆಲಸ ಮಾಡೋರು ಮೈ, ಕೈ ನೋವು, ರಾತ್ರಿ ನಿದ್ರೆ ಬರಲ್ಲ ಅಂತ ಕುಡಿಯುತ್ತಾರೆ.
ಆದರೆ ಕೆಲವರು ಕುಡಿಯೋಕೆ ಹುಟ್ಟಿದವರ ವರ್ಗಕ್ಕೆ ಸೇರಿದವ್ರು ಅನ್ಸುತ್ತೆ. ಕಂಟ್ರೋಲ್‌ಗೆ ಸಿಗದಷ್ಟು ಕುಡಿದಾಗ ಹೀಗೆಲ್ಲಾ ಆಗುತ್ತೆ. ಅತಿ ವೇಗ ತಿಥಿ ಬೇಗ ಅಂತಾರಲ್ವಾ ಹಾಗೇ ಇದು ಎಂದು ನಿರ್ಮಾಪಕ ಉಮಾಪತಿ ಗೌಡ ಟಾಂಗ್ ಕೊಟ್ಟಿದ್ದಾರೆ.