ಹೊಸದಿಗಂತ ಡಿಜಿಟಲ್ ಡೆಸ್ಕ್:
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಗೋಡೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಕುರಿತು ವಿವಾದಾತ್ಮಕ ಘೋಷಣೆಗಳನ್ನು ಬರೆಯಲಾಗಿದೆ.
“ಕೇಸರಿ ಉರಿಯುತ್ತದೆ”, “ಮೋದಿಯವರ ಸಮಾಧಿಯನ್ನು ಅಗೆಯಲಾಗುವುದು”, “ಮುಕ್ತ ಕಾಶ್ಮೀರ” ಮತ್ತು “ಐಒಕೆ (ಭಾರತೀಯ ಆಕ್ರಮಿತ ಕಾಶ್ಮೀರ)” ಎಂಬ ಘೋಷಣೆ ಬರೆಯಲಾಗಿದೆ.
ಜೆಎನ್‌ಯು ಸ್ಕೂಲ್ ಆಫ್ ಲ್ಯಾಂಗ್ವೇಜಸ್‌ನ ಗೋಡೆಗಳಲ್ಲಿ ಕೆಂಪು ಮತ್ತು ನೀಲಿ ಬಣ್ಣದ ಶಾಯಿಯಲ್ಲಿ ಈ ಘೋಷಣೆಗಳನ್ನು ಬರೆಯಲಾಗಿದೆ. ಇದು ಯಾರ ಕೃತ್ಯ ಎಂಬ ಬಗ್ಗೆ ಜೆಎನ್‌ಯು ಆಡಳಿತ ಮಂಡಳಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ವಿಶ್ವವಿದ್ಯಾಲಯ ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವರ್ಷದ ಹಿಂದೆಯೂ ಜೆಎನ್‌ಯು ಸ್ಕೂಲ್ ಆಫ್ ಲ್ಯಾಂಗ್ವೇಜಸ್‌ನ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ವಿರುದ್ಧ ವಿವಾದಾತ್ಮಕ ಘೋಷಣೆಗಳನ್ನು ಬರೆಯಲಾಗಿತ್ತು.
ಇದೀಗ ಜೆಎನ್‌ಯು ಆಡಳಿತ ಮಂಡಳಿ ವಿವಾದಾತ್ಮಕ ಗೋಡೆಬರಹಗಳನ್ನು ಅಳಿಸಿಹಾಕಲು ಮತ್ತು ಈ ಸಂಬಂಧ ತನಿಖೆ ನಡೆಸಲು ಸೂಚನೆ ನೀಡಿದೆ.