ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸುವ ವಿರುದ್ಧ ಎಂದು ವಿಪಕ್ಷಗಳು ಕೇಂದ್ರದ ವಿರುದ್ಧ ತಿರುಗಿಬಿದ್ದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಆಹ್ವಾನಿಸಬೇಕೆಂದು ಒತ್ತಾಯಿಸಿದ್ದರು.
ಇದೀಗ ಈ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಕಾಂಗ್ರೆಸ್ ನ ಎಲ್ಲ ಪ್ರಶ್ನೆ , ವಾದಗಳಿಗೆ ತೆರೆಎಳೆದಿದ್ದಾರೆ .
1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಸಂಸತ್ತಿನ ಅನೆಕ್ಸ್ ಉದ್ಘಾಟಿಸಿದ್ರು. ನಂತ್ರ 1987ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಸಂಸತ್ತಿನ ಗ್ರಂಥಾಲಯವನ್ನುಉದ್ಘಾಟಿಸಿದರು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಆಗಸ್ಟ್ 1975ರಲ್ಲಿ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಸಂಸತ್ತಿನ ಅನೆಕ್ಸ್ ಅನ್ನು ಉದ್ಘಾಟಿಸಿದರು ಮತ್ತು ನಂತರ 1987 ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಸಂಸತ್ತಿನ ಗ್ರಂಥಾಲಯವನ್ನು ಉದ್ಘಾಟಿಸಿದರು. ನಿಮ್ಮ (ಕಾಂಗ್ರೆಸ್) ಸರ್ಕಾರದ ಮುಖ್ಯಸ್ಥರು ಅವುಗಳನ್ನ ಉದ್ಘಾಟಿಸಲು ಸಾಧ್ಯವಾದರೆ, ನಮ್ಮ ಸರ್ಕಾರದ ಮುಖ್ಯಸ್ಥರು ಅದನ್ನು ಏಕೆ ಉದ್ಘಾಟಿಸಬಾರದು.?’ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೆಳಮನೆಯ ಸ್ಪೀಕರ್ ಓಂ ಬಿರ್ಲಾ ಅವರು ಮೇ 28ರಂದು ಭಾನುವಾರ ಹೊಸ ಕಟ್ಟಡವನ್ನ ಉದ್ಘಾಟಿಸಲಿದ್ದಾರೆ ಎಂದು ಅಧಿಕೃತ ಆಹ್ವಾನವನ್ನ ಪ್ರಕಟಿಸಲಾಗಿದೆ. ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸಂರಕ್ಷಣಾವಾದಿಗಳನ್ನ ಕೆರಳಿಸುವ ಕ್ರಮದಲ್ಲಿ ಭಾರತದ ವಸಾಹತುಶಾಹಿ ಭೂತಕಾಲವನ್ನ ತೊಡೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಅಂದ್ಹಾಗೆ, ಭಾನುವಾರ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹೊಸ ಸಂಸತ್ ಕಟ್ಟಡವನ್ನ ರಾಷ್ಟ್ರಪತಿಗಳು ಉದ್ಘಾಟಿಸಬೇಕು, ಪ್ರಧಾನಿ ಅಲ್ಲ ಎಂದು ಹೇಳಿದ್ದರು.