1,281 ಮದರಸಾ ಶಾಲೆ ಮಿಡ್ಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಗಿ ಪರಿವರ್ತನೆ: ಅಸ್ಸಾಂ ಸರಕಾರ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಇಂದಿನಿಂದ ಅಸ್ಸಾಂನಲ್ಲಿ 1,281 ಮದರಸಾ ಶಿಕ್ಷಣ(Madrasas Education) ಮಿಡ್ಲ್ ಇಂಗ್ಲೀಷ್(Middle English) ಸ್ಕೂಲ್ ಆಗಿ ಪರಿವರ್ತಿಸಲಾಗಿದೆ.

ಅಸ್ಸಾಂ ಸೆಕೆಂಡರಿ ಬೋರ್ಡ್ ಎಜುಕೇಶನ್( SEBA) ಈ ಆದೇಶ ಹೊರಡಿಸಿದ್ದು, ಅಸ್ಸಾಂ ಶಿಕ್ಷಣ ಸಚಿವ ರನೋಜ್ ಪೆಗು ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 1,281 ಮದರಾಸ ಶಾಲೆಗಳನ್ನು ಮಿಡ್ಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಗಿ ಪರಿವರ್ತಿಸಲಾಗಿದೆ.

ಈ ಹಿಂದೆಯೇ ಸರ್ಕಾರದ ಖರ್ಚಿನಲ್ಲಿ ಮದರಸಾ ನಡೆಸಲು ಸಾಧ್ಯವಿಲ್ಲ. ಡಾಕ್ಟರ್, ಎಂಜಿನೀಯರ್ ಸೇರಿದಂತೆ ಹಲವು ಪ್ರತಭಾನ್ವಿತರನ್ನು ಸಮಾಜಕ್ಕೆ ನೀಡುವ ಕೆಲಸ ಸರ್ಕಾರಿ ಅನುದಾನಿತ ಶಾಲೆಗಳಲ್ಲಾಗಬೇಕು. ಇದರ ಬದಲು ಯಾವುದೇ ಧಾರ್ಮಿಕ ಮುಖಂಡರನ್ನು ಸೃಷ್ಟಿಸುವ ಕೆಲಸಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂಬು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಏಕರೂಪತೆ ತರಲು ಅಸ್ಸಾಂ ಸರ್ಕಾರ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೆಲಸ ಮಾಡುತ್ತಿದೆ. ಅಸ್ಸಾಂನಲ್ಲಿರುವ ಮದರಾಸಗಳು ಸಾರ್ವಜನಿಕ ಶಾಲೆಯಾಗಬೇಕು. ಮೌಲ್ವಿ, ಮುಲ್ಲಾಗಳನ್ನು ಸೃಷ್ಟಿಸಲು ಸರ್ಕಾರದಿಂದ ಅನುದಾನ ನೀಡಲು ಸಾಧ್ಯವಿಲ್ಲ. ಸರ್ಕಾರ ಆರ್ಥಿಕ ಅನುದಾನ ನೀಡುವ ಶಾಲೆಗಳಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಇರಬೇಕು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

ಮದರಸಾದಲ್ಲಿ ಕಲಿಯುವ ಮಕ್ಕಳು ಮುಖ್ಯವಾಹನಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ.ಹೀಗಾಗಿ ಎಲ್ಲಾ ಮದರಸಾಗಳಲ್ಲಿ ಶಿಕ್ಷಣ ಮುಖ್ಯವಾಹಿನಿ ಶಿಕ್ಷಣದಲ್ಲೇ ಇರಬೇಕು. ಮಕ್ಕಳು ಪ್ರವರ್ಧಮಾನಕ್ಕೆ ಬಂದಾಗ ತಾವು ಏನಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲೇ ಒತ್ತಾಯಪೂರ್ಕವಾಗಿ ಅವರ ಮೇಲೆ ನಮ್ಮ ಉದ್ದೇಶ ಈಡೇರಿಸಿಕೊಳ್ಳುವುದು ತಪ್ಪು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!