ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಮೊಬೈಲ್‌ನಲ್ಲಿತ್ತು ಜಿಹಾದಿ ವಿಡಿಯೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಮೂಲಕ ಕರಾವಳಿಯನ್ನು ತಲ್ಲಣಗೊಳಿಸಿರುವ ಉಗ್ರ ಮುಹಮ್ಮದ್ ಶಾರಿಕ್ ಬಳಿ ಇದ್ದ ಪೆನ್ ಡ್ರೈವ್ ಹಾಗೂ ಮೊಬೈಲ್ ಪೋನ್‌ನಿಂದ ಸಾಕಷ್ಟು ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಶಾರಿಕ್ ಮೊಬೈಲ್‌ನಲ್ಲಿ ೫೫ ಜಿಬಿಗೂ ಹೆಚ್ಚು ವಿಡಿಯೋ ಮತ್ತು ಫೋಟೋಗಳು ಪತ್ತೆಯಾಗಿದ್ದು, ಆತ ಮತಾಂಧನಾಗಿದ್ದ ಎಂಬುದಕ್ಕೆ ಮತ್ತಷ್ಟು ಸಾಕ್ಷಾಧಾರಗಳು ಪೊಲೀಸರಿಗೆ ದೊರೆತಿವೆ. ಜಿಹಾದಿ ವಿಡಿಯೋ, ಪೋರ್ನ್ ವಿಡಿಯೋ ಮತ್ತು ಸಾಹಿತ್ಯಗಳು ಈತನಲ್ಲಿದ್ದವು ಎನ್ನಲಾಗಿದೆ.

ಮೊಬೈಲ್‌ನಲ್ಲಿ ಹಲವಾರು ಅಶ್ಲೀಲ ವಿಡಿಯೋಗಳನ್ನು ತುಂಬಿಕೊಂಡಿದ್ದಲ್ಲದೆ ಆತ ಶರೀಯಾ ಕಾನೂನಿನ ಬಗ್ಗೆ ವಿಶೇಷ ಒಲವು ಹೊಂದಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!