ಬರೋಬ್ಬರಿ 187 ನಾಣ್ಯಗಳನ್ನು ನುಂಗಿದ ಭೂಪ: ಅಂತೂ ಹೊರತೆಗೆದ ಡಾಕ್ಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಗಲಕೋಟೆಯಲ್ಲಿ ವ್ಯಕ್ತಿಯೋರ್ವ ಬರೋಬ್ಬರಿ 187 ನಾಣ್ಯಗಳನ್ನು ನುಂಗಿರುವ ಪ್ರಕರಣ ಬೆಳಕಿಗೆ ಬಂದಿದೆ.

58 ವರ್ಷದ ದ್ಯಾಮಪ್ಪ ಹರಿಜನ ಎಂಬವರು 187 ನಾಣ್ಯಗಳನ್ನು ನುಂಗಿದ್ದರು.5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1ರ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು.

ಬಳಿಕ ವ್ಯಕ್ತಿಗೆ ಹೆಚ್​ಎಸ್​ಕೆ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಾಣ್ಯಗಳನ್ನು ಹೊರತೆಗೆದು ಮರುಜೀವ ನೀಡಿದ್ದಾರೆ.
ದ್ಯಾಮಪ್ಪ ಮೂಲತಃ ರಾಯಚೂರು ಜಿಲ್ಲೆಯ ಸಂತೆ ಕೆಲ್ಲೂರು ಗ್ರಾಮದ ನಿವಾಸಿ. ಇವರು ಸುಮಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನಲಾಗ್ತಿದೆ. ಆಗಾಗ ಮದ್ಯ ಸೇವಿಸುತ್ತಿದ್ದ ಈತ ತನಗೆ ಗೊತ್ತಿಲ್ಲದೇ ಒಂದು, ಎರಡು, ಐದು ಹೀಗೆ ಬೇರೆ ಬೇರೆ ನಾಣ್ಯ ನುಂಗುತ್ತ ಬಂದಿದ್ದಾನೆ. 187 ನಾಣ್ಯಗಳು ಆತನ ಹೊಟ್ಟೆ ಸೇರಿದ್ದವು.

ಆದರೆ ಹೊಟ್ಟೆ ನೋವು ಆರಂಭವಾದಾಗ ದ್ಯಾಮಪ್ಪ ಮನೆಯವರಿಗೆ ತಿಳಿಸಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಗೆ ತೋರಿಸಲಾಗಿತ್ತು. ಅಲ್ಲಿಂದ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದ್ಯಾಮಪ್ಪನನ್ನು ಕರೆತರಲಾಗಿತ್ತು. ಎಕ್ಸ್ ರೆ, ಎಂಡೋಸ್ಕೊಪಿ ಮೂಲಕ ದ್ಯಾಮಪ್ಪನ ಪರೀಕ್ಷೆ ನಡೆಸಿದ ವೈದ್ಯರಿಗೆ ಅಚ್ಚರಿ ಆಗಿತ್ತು.

ಎಲ್ಲಾ ನಾಣ್ಯಗಳು ಸೇರಿ ಸುಮಾರು 1.2 ಕೆ.ಜಿ ತೂಕ ಇದ್ದು, ಗ್ಯಾಸ್ಟ್ರೋಟಾಮಿ ಎಂಬ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ನಾಣ್ಯ ಹೊರತೆಗೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!