ಈ ಸುಡು ಬಿಸಿಲಿಗೆ ತಂಪಾಗಿರೋ ಜೊತೆಗೆ ಆರೋಗ್ಯಕ್ಕೆ ಉತ್ತಮವಾಗಿರುವ ಪುದೀನ ಡ್ರಿಂಕ್ ಹೇಗೆ ರೆಡಿ ಮಾಡಬಹುದು ಅಂತ ನೋಡೋಣ..
ಬೇಕಾಗುವ ಪದಾರ್ಥಗಳು
1 ಕಪ್- ತಾಜಾ ಪುದೀನ ಸೊಪ್ಪು
2 ಟೇಬಲ್ ಚಮಚ – ಲೆಮನ್ ಜ್ಯೂಸ್
2 ಟೇಬಲ್ ಚಮಚ ಬೆಲ್ಲ/ಸಕ್ಕರೆ
1/2 ಟೀಚಮಚ- ಜೀರಿಗೆ ಪುಡಿ
1/2 ಟೀಚಮಚ- ಕಾಳು ಮೆಣಸು ಪುಡಿ
ಉಪ್ಪು ಸ್ವಲ್ಪ
2 ಗ್ಲಾಸ್ ಕೋಲ್ಡ್ ವಾಟರ್
ಐಸ್ ಕ್ಯೂಬ್‌ಗಳು
ತಯಾರಿಸುವ ವಿಧಾನ
ಮಿಕ್ಸಿ ಜಾರ್‌ಗೆ ಪುದೀನ ಸೊಪ್ಪು, ಬೆಲ್ಲ/ಸಕ್ಕರೆ, ಜೀರಿಗೆ ಪುಡಿ, ಕಾಳು ಮೆಣಸು ಪುಡಿ, ಉಪ್ಪು, ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನ ಗ್ಲಾಸ್ ಗೆ ಹಾಕಿ,ಲೆಮನ್ ಜ್ಯೂಸ್ ಮತ್ತು ಐಸ್ ಕ್ಯೂಬ್ ಹಾಕಿ, ಚೆನ್ನಾಗಿ ಮಿಶ್ರ ಮಾಡಿದರೆ ಸಿಂಪಲ್ ಪುದೀನ ಡ್ರಿಂಕ್ ರೆಡಿ.
ನೀರಿನ ಬದಲು ಸೋಡಾ ನೀರು ಬಳಸಿ, ಪುದೀನ ಲೆಮನೇಡ್ ತಯಾರಿಸಬಹುದು.