April 26, 2026
Sunday, April 26, 2026
spot_img

ತಂಪು ತಂಪು ಕೂಲ್ ಕೂಲ್.. ಆಮೇಲೆ ಮೈ ಕೈ ಫುಲ್ ಡಲ್! AC ‘ಶಾಕ್’ ಬಗ್ಗೆ ನಿಮಗೇನು ಗೊತ್ತು?

ನಾವೆಲ್ಲರೂ ಬೇಸಿಗೆಯ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಎಸಿ ಮೊರೆ ಹೋಗುತ್ತೇವೆ. ಆದರೆ ಎಸಿ ಕೊಠಡಿಯಿಂದ ಹೊರಬಂದ ತಕ್ಷಣ ಸಣ್ಣಗೆ ತಲೆಸುತ್ತು ಅಥವಾ ವಿಪರೀತ ಸುಸ್ತು ಕಾಣಿಸಿಕೊಳ್ಳುವುದು ಅನೇಕರ ಅನುಭವ. ವಿಜ್ಞಾನಿಗಳ ಪ್ರಕಾರ, ಇದನ್ನು ‘ಥರ್ಮಲ್ ಶಾಕ್’ ಎಂದು ಕರೆಯಬಹುದು.

ಎಸಿ ಕೊಠಡಿಯ 20-22 ಡಿಗ್ರಿ ತಾಪಮಾನದಿಂದ ನೇರವಾಗಿ ಹೊರಗಿನ 35-40 ಡಿಗ್ರಿ ತಾಪಮಾನಕ್ಕೆ ಹೋದಾಗ ದೇಹಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ.

ಎಸಿ ಗಾಳಿಯು ಗಾಳಿಯಲ್ಲಿನ ತೇವಾಂಶವನ್ನು ಹೀರುತ್ತದೆ, ಇದು ದೇಹದಲ್ಲಿ ನೀರಿನ ಅಂಶ ಕಡಿಮೆ ಮಾಡಿ ಸುಸ್ತಾಗುವಂತೆ ಮಾಡುತ್ತದೆ.

ಹಠಾತ್ ತಾಪಮಾನ ಬದಲಾವಣೆಯಿಂದ ರಕ್ತನಾಳಗಳು ಸಂಕುಚಿತಗೊಂಡು ಅಥವಾ ಹಿಗ್ಗುವುದರಿಂದ ರಕ್ತದೊತ್ತಡದಲ್ಲಿ ಬದಲಾವಣೆಯಾಗಿ ಆಯಾಸವಾಗುತ್ತದೆ.

ಎಸಿಯಲ್ಲಿ ದೀರ್ಘಕಾಲ ಇರುವುದರಿಂದ ಚರ್ಮ ಮತ್ತು ಶ್ವಾಸಕೋಶದ ತೇವಾಂಶ ಕಡಿಮೆಯಾಗಿರುವುದು ಕೂಡ ಇದಕ್ಕೆ ಮುಖ್ಯ ಕಾರಣ

ಎಸಿಯಿಂದ ಹೊರಬರುವ 5-10 ನಿಮಿಷಗಳ ಮೊದಲು ಎಸಿ ಆಫ್ ಮಾಡಿ, ದೇಹವು ಸಾಮಾನ್ಯ ತಾಪಮಾನಕ್ಕೆ ಬರಲು ಅವಕಾಶ ನೀಡುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !