‘ಕೂರ್ಗ್ ಬೈ ರೇಸ್’ ಶಾಸನಬದ್ಧ ಸಮಸ್ಯೆ: ಎನ್.ಯು.ನಾಚಪ್ಪ

ಹೊಸದಿಗಂತ ವರದಿ, ಕೊಡಗು:
‘ಕೂರ್ಗ್ ಬೈ ರೇಸ್’ ಎಂಬುದು ಶಾಸನಬದ್ಧ ಸಮಸ್ಯೆಯಾಗಿದ್ದು, ಅದರ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸಲು ಜಿಲ್ಲಾಡಳಿತ ಯಾವುದೇ ಅಧಿಕಾರ ಹೊಂದಿಲ್ಲ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.
ವಿಧಾನ ಪರಿಷತ್’ನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಅವರು ಅಭಿನಂದನೆ ಸಲ್ಲಿಸಿ ‘ಕೂರ್ಗ್ ಬೈ ರೇಸ್’ ಗೊಂದಲದ ಕುರಿತು ವಿವರಿಸಿದರು.
‘ಕೂರ್ಗ್ ಬೈ ರೇಸ್’ ಅಡಿಯಲ್ಲಿ ವಿಶೇಷ ಕೋವಿ ಹಕ್ಕು ದೊರೆತಿದ್ದು, ತಾವುಗಳು ಮಧ್ಯ ಪ್ರವೇಶ ಮಾಡಿ ಗೊಂದಲ ನಿವಾರಣೆಗೆ ಸಹಕಾರ ನೀಡಬೇಕೆಂದು ಹರಿಪ್ರಸಾದ್ ಅವರಲ್ಲಿ ನಾಚಪ್ಪ ಮನವಿ ಮಾಡಿದರು. ಅಧಿಕಾರಿಗಳು ಕಾನೂನು ವಿಷಯಗಳ ಬಗ್ಗೆ ಸರ್ಕಾರಗಳಿಗೆ ಸಂವಹನ ಮಾಡಬಹುದು; ಆದರೆ ಅದರ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕಾನೂನಿನ ದುರುಪಯೋಗವಾಗಿದೆ ಎಂದು ಆರೋಪಿಸಿದ ನಾಚಪ್ಪ, ಕೊಡವರ ಹಕ್ಕಿನ ಪರ ಧ್ವನಿ ಎತ್ತುವಂತೆ ಬಿ.ಕೆ.ಹರಿಪ್ರಸಾದ್ ಅವರಲ್ಲಿ ಕೋರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!