ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಗೆ ನ್ಯಾಕ್ ‘ಎ’ ಗ್ರೇಡ್‌ ಮಾನ್ಯತೆ

ಹೊಸದಿಗಂತ ವರದಿ, ಪೊನ್ನಂಪೇಟೆ:

ಕೊಡವ ಎಜುಕೇಷನ್ ಸೊಸೈಟಿಯ (KES) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು (CIT) ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (NAAC) ‘ಎ’ ಗ್ರೇಡ್ ಮಾನ್ಯತೆ ಪಡೆದುಕೊಂಡಿದೆ.
ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಸಿಐಟಿಯ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಅವರು, ಸಿಐಟಿಯ ಪ್ರಾಂಶುಪಾಲ ಡಾ.ಎಂ.ಬಸವರಾಜ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.
ನ್ಯಾಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಂಸ್ಥೆಯನ್ನು ಮೌಲ್ಯಮಾಪನ ಮಾಡಲು ಮೌಲ್ಯಮಾಪಕರ ತಂಡವು ಡಿ. 22 ಮತ್ತು 23 ರಂದು ಸಿಐಟಿಯ ಹಲವಾರು ವಿಭಾಗಗಳಿಗೆ ಭೇಟಿ ನೀಡಿತ್ತು.
ನ್ಯಾಕ್ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವ ಮತ್ತು ಮಾನ್ಯತೆ ನೀಡುವ ಸರ್ಕಾರಿ ಸಂಸ್ಥೆಯಾಗಿದ್ದು, ಶಿಕ್ಷಣದ ಗುಣಮಟ್ಟದ ಸ್ಥಿತಿಯ ಬಗ್ಗೆ ಸಂಸ್ಥೆಗಳಲ್ಲಿ ತಿಳುವಳಿಕೆ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ನ್ಯಾಕ್ ಮಾನ್ಯತೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಕೌಶಲ್ಯ ಮತ್ತು ಜ್ಞಾನವನ್ನು ಬೆಳೆಸಲು ಸಹಾಯ ಮಾಡುವ ಮೂಲಕ ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ
ಯಶಸ್ಸಿಗೆ ಕಾರಣರಾದ ಪ್ರಾಚಾರ್ಯರು ಹಾಗೂ ಸಿಬ್ಬಂದಿಯನ್ನು ಶ್ಲಾಘಿಸಿದ ಕೆಇಎಸ್ ಅಧ್ಯಕ್ಷ ಡಾ.ಎಂ.ಸಿ. ಕಾರ್ಯಪ್ಪ ಅವರು, ‘ಎ’ ಗ್ರೇಡ್ ಮಾನ್ಯತೆಯಿಂದ ಸಿಬ್ಬಂದಿಯ ಜವಾಬ್ದಾರಿ ಹೆಚ್ಚಿದ್ದು, ಭವಿಷ್ಯದಲ್ಲಿ ಉನ್ನತ ಶ್ರೇಣಿಗೆ ಹೋಗಲು ಶ್ರಮಿಸುವಂತೆ ಮಾಡಿದೆ ಎಂದು ಹೇಳಿದರು.
ಡಾ. ಕಾರ್ಯಪ್ಪ ಅವರ ಅಭಿಪ್ರಾಯಗಳನ್ನು ಅನುಮೋದಿಸಿದ ಪೂವಯ್ಯ ಮಾತನಾಡಿದರು.
ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಡಾ.ಪುಷ್ಪಾ ಕುಟ್ಟಣ್ಣ, ಡಾ.ಪೊನ್ನಮ್ಮ ಮಾಚಯ್ಯ ಮತ್ತು ಕೆ.ಎಸ್. ತಿಮ್ಮಯ್ಯ, ಸಿಐಟಿಯ ತಂಡಗಳಿಗೆ ನ್ಯಾಕ್ಗೆ ತಯಾರಿ ನಡೆಸಲು ಮಾರ್ಗದರ್ಶನ ನೀಡಿದ್ದರು.
ಸಿಐಟಿಯ ನ್ಯಾಕ್ ಸಂಯೋಜಕ ಡಾ.ರಾಮಕೃಷ್ಣ, ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಸಂಯೋಜಕ, ಪ್ರೊ.ಬಿ.ಜೆ.ಕಿಶನ್ ಕರುಂಬಯ್ಯ, ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!