ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನ ಗೆಲುವು ನಿಶ್ಚಿತ: ಸಚಿವ ನಿರಾಣಿ

ಹೊಸದಿಗಂತ ವರದಿ, ಕಲಬುರಗಿ:

ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳೆಲ್ಲವು ಪ್ರಥಮ ಹಂತದಲ್ಲೆ ನಮ್ಮ ಗುರಿಯಾಗಿದ್ದು, 130 ರಿಂದ 140 ಸ್ಥಾನಗಳನ್ನು ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ನಗರದ ಗೋಲ್ಡ್ ಹಬ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗಾಗಿ ಬಿಜೆಪಿ ಸಕಾ೯ರ ಸಾಕಷ್ಟು ಯೋಜನೆಗಳನ್ನು ನೀಡಿ, ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದರು.

ಹಾಲಿ ಶಾಸಕ ಪ್ರಿಯಾಂಕ್ ಖಗೆ೯ ಕ್ಷೇತ್ರವಾದ ಚಿತ್ತಾಪುರ ಕ್ಷೇತ್ರದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಟಫ್ ಇದೆಯಾ ಎಂಬ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಚಕ್ರವ್ಯೂಹ, ವನ್ನು ರಚಿಸಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಲಬುರಗಿ ಜನ ಸೋಲಿಸಿದ್ದಾರೆ.ಇನ್ನೂ ಚಿತ್ತಾಪುರದಲ್ಲಿ ಪುತ್ರ ಪ್ರಿಯಾಂಕ್ ಖಗೆ೯ಯವರನ್ನು ಕಲಬುರಗಿ ಜನ ಬಿಡುತ್ತಾರೆಯೆ ಎಂದು ಹೇಳಿದರು.

ನಮಗೆ ಚಿತ್ತಾಪುರ ಒಂದೆ ಅಲ್ಲ.ರಾಜ್ಯದ ಹೈವೋಲ್ಟೆಜ್ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನವಿದೆ ಎಂದು ಹೇಳಿದ ಅವರು, ಇಂದು ಕಲಬುರಗಿ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಜೀ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ.ಸಭೆಯಲ್ಲಿ ಚುನಾವಣೆಯ ರಣತಂತ್ರ ಬಗ್ಗೆ ಚಚೆ೯ ಮಾಡಲಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!