ಕಾಪ್27 ಹವಾಮಾನ ಶೃಂಗ: ಭಾರತ ಏನು ಹೇಳುತ್ತಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಾಪ್27 ಸಮ್ಮೇಳನ ನಡೆಯುತ್ತಿದೆ. ಇದರಲ್ಲಿ ಭಾರತದ ನೀತಿ ನಿರೂಪಣೆ ವ್ಯಕ್ತವಾಗುತ್ತಿರುವ ಬಗೆ ಹೀಗಿದೆ.

  • ಹವಾಮಾನ ಬದಲಾವಣೆ ಜತೆ ವ್ಯವಹರಿಸುವುದಕ್ಕೆ ಹಸಿರು ಇಂಧನಗಳ ಅಭಿವೃದ್ಧಿಯೇ ಪರಿಹಾರ ಎಂಬುದು ಭಾರತದ ಪ್ರಮುಖ ಪ್ರತಿಪಾದನೆ. “ಹವಾಮಾನ ಬದಲಾವಣೆಗೆ ಮನುಷ್ಯನ ಕಾರ್ಯಗಳೇ ಕಾರಣವಾಗಿರುವುದರಿಂದ ಪರಿಹಾರವೂ ಅಲ್ಲಿಂದಲೇ ಶುರುವಾಗಬೇಕು” ಎಂದು ಶೃಂಗಸಭೆಯಲ್ಲಿ ಭಾಗವಹಿಸಿರುವ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಬ್ಲಾಗ್‌ನಲ್ಲಿ ಬರೆದಿದ್ದಾರೆ.
  • ಕರ್ಕಾಟಕ ವೃತ್ತ ಮತ್ತು ಮಕರಸಂಕ್ರಮಣ ವೃತ್ತಗಳ ನಡುವೆ ಬರುವ ಭಾರತವು ಹವಾಮಾನ ಬದಲಾವಣೆಯಿಂದ ಸಂತ್ರಸ್ತಗೊಳ್ಳುವ ಪ್ರಮುಖ ದೇಶಗಳಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮುನ್ನೆಚ್ಚರಿಕೆ ಮತ್ತು ಕ್ರಿಯಾಯೋಜನೆಯನ್ನು ಬೆಂಬಲಿಸಿರುವುದಾಗಿ ಸಚಿವರು ಹೇಳಿದ್ದಾರೆ. ಈ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಮಾಡಲಾಗುತ್ತಿರುವ ವೆಚ್ಚದಲ್ಲಿ ಅದಾಗಲೇ ಭಾರಿ ಏರಿಕೆ ಕಂಡುಬಂದಿರುವುದನ್ನೂ ಸಚಿವರು ಒತ್ತಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!