Wednesday, March 29, 2023

Latest Posts

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನೆಗೆ ಪೊಲೀಸರ ಭೇಟಿ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಜನವರಿ 30 ರಂದು ಶ್ರೀನಗರದಲ್ಲಿ, ರಾಹುಲ್ ಗಾಂಧಿ ಅನೇಕ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ್ದು, ಕೆಲ ವಿಚಾರಗಳು ಬೆಳಕಿಗೆ ಬಂದಿವೆ. ಅದರ ಕುರಿತು ಮಾತನಾಡಲು ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನೆಗೆ ಪೊಲೀಸರು ತಲುಪಿರುವುದಾಗಿ ಎಸ್‌ಪಿ ಹೂಡಾ ತಿಳಿಸಿದರು.

ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಅಲ್ಲಿನ ಮಹಿಳೆಯರು ಹೇಳಿರುವುದಾಗಿ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದು, ಈ ಕುರಿತು ವಿವರ ಪಡೆಯಲು ರಾಹುಲ್ ಗಾಂಧಿ ಭೇಟಿ ಮಾಡಲು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಹುಲ್ ಅವರಿಂದ ವಿವರ ಪಡೆದು ಸಂತ್ರಸ್ತರಿಗೆ ನ್ಯಾಯ ಕೊಡಿಸುತ್ತೇವೆ ಎಂದರು. ಈ ನಡುವೆ ಎರಡು ದಿನಗಳ ಹಿಂದೆ ಪೊಲೀಸರು ರಾಹುಲ್ ಗಾಂಧಿಗೆ ನೋಟಿಸ್ ನೀಡಿದ್ದರು.

ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಶ್ರೀನಗರದಲ್ಲಿ ಮಾತನಾಡಿದ ರಾಹುಲ್ ಗಾಂಧಿ…”ಮಹಿಳೆಯರ ಮೇಲೆ ಈಗಲೂ ಅತ್ಯಾಚಾರ ನಡೆಯುತ್ತಿದೆ” ಎಂಬ ಮಾತಿಗೆ ಸಂತ್ರಸ್ತರ ವಿವರ ನೀಡಬೇಕು ಎಂದು ಪೊಲೀಸರು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ರಾಹುಲ್ ಗಾಂಧಿ ಮನೆ ತಲುಪಿದ ಪೊಲೀಸರಿಗೆ ರಾಹುಲ್ ಗಾಂಧಿ ಉತ್ತರಿಸುತ್ತಾರಾ? ನೋಡಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!