Wednesday, March 29, 2023

Latest Posts

ಶೀಘ್ರದಲ್ಲೇ ದೆಹಲಿ AIIMS ನಲ್ಲಿ ರೋಬೋಟಿಕ್ ಸರ್ಜರಿ ತರಬೇತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿ ಏಮ್ಸ್‌ (AIIMS) ನಲ್ಲಿ ಶೀಘ್ರದಲ್ಲೇ ರೋಬೋಟಿಕ್‌ ಸರ್ಜರಿ ತರಬೇತಿ ಸೌಲಭ್ಯ ಆರಂಭವಾಗಲಿದೆ. ಈ ಕುರಿತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದೆಹಲಿ ಮತ್ತು ಇಂಡಿಯಾ ಮೆಡ್‌ಟ್ರಾನಿಕ್ ಪ್ರೈವೇಟ್ ಲಿಮಿಟೆಡ್‌ಗಳ ನಡುವೆ ಒಪ್ಪಂದ ಏರ್ಪಟ್ಟಿದೆ.

ಈ ಎರಡು ಸಂಸ್ಥೆಗಳು ಜಂಟಿಯಾಗಿ ರೋಬಾಟಿಕ್‌ ಸರ್ಜರಿ ಸೌಲಭ್ಯವನ್ನು ಅಭಿವೃದ್ಧಿಪಡಿಸಲಿವೆ. ಈ ಕುರಿತು ದೆಹಲಿ ಏಮ್ಸ್‌ ಅಧಿಕೃತ ಹೇಳಿಕೆಯನ್ನು ನೀಡಿದ್ದು “ರೋಬೋಟಿಕ್‌ ರಬೇತಿ ಸೌಲಭ್ಯವನ್ನು ಸೃಷ್ಟಿಸಲು ನಾವು ಇಂಡಿಯಾ ಮೆಡ್‌ಟ್ರಾನಿಕ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸಹಯೋಗದ ಒಪ್ಪಂದವನ್ನು ಮಾಡಿಕೊಂಡಿದ್ದೇವೆ” ಎಂದಿದೆ.

ಗಮನಾರ್ಹವಾಗಿ, ಇದು ಭಾರತದಲ್ಲಿನ ಸರ್ಕಾರಿ ಆರೋಗ್ಯ ವೃತ್ತಿಪರರಿಗೆ ಮೊದಲ ರೋಬೋಟಿಕ್ ತರಬೇತಿ ಸೌಲಭ್ಯ ಎಂದೆನಿಸಲಿದೆ. ರೋಬೋಟಿಕ್ ಸರ್ಜರಿ ತರಬೇತಿ ಸೌಲಭ್ಯದ ಸ್ಥಾಪನೆಯು ಈಗಾಗಲೇ ರೋಬೋಟಿಕ್‌ ಸರ್ಜರಿ ತರಬೇತಿ ಹೊಂದಿರುವವರಿಗೆ ಆರೋಗ್ಯ ಸಿಬ್ಬಂದಿಗಳಿಗೆ ಕಾರ್ಯವಿಧಾನದ ಮತ್ತು ಸಾಕ್ಷ್ಯಾಧಾರಿತ ವೈದ್ಯಕೀಯ ಶಿಕ್ಷಣ ಚಟುವಟಿಕೆಗಳ ಮೂಲಕ ಕೌಶಲ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!