ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ದಕ್ಷಿಣ ಅಫ್ರಿಕಾ ಅಥವಾ ಶ್ರೀಲಂಕಾದಲ್ಲಿ
ಆಯೋಜಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ
14ನೇ ಆವೃತ್ತಿ ವೇಳೆ ಕೊರೋನಾ ಹೆಚ್ಚಾದ ಕಾರಣಕ್ಕೆ ಐಪಿಎಲ್ ಸ್ಥಗಿತಗೊಳಿಸಿ ಸೆಪ್ಟೆಂಬರ್ನಲ್ಲಿ ಯುಎಇನಲ್ಲಿ 2ನೇ ಹಂತ ಮುಗಿಸಲಾಯಿತು. ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಬಿಸಿಸಿಐ ಚಿಂತಿಸಿದೆ ಎನ್ನಲಾಗುತ್ತಿದೆ.
ಎಲ್ಲಾ ಸಮಯದಲ್ಲೂ ಯುಎಇ ಮೇಲೆ ಅವಲಂಬಿತವಾಗಲು ಆಗುವುದಿಲ್ಲ. ಹಾಗಾಗಿ ಈ ಬಾರಿ ಹೊಸ ಆಯ್ಕೆಗಳನ್ನು ಅನ್ವೇಷಣೆ ಮಾಡಲು ನಿರ್ಧರಿಸಿದ್ದೇವೆ. ದಕ್ಷಿಣ ಆಫ್ರಿಕಾದ ಸಮಯದ ವ್ಯತ್ಯಾಸ ನಮ್ಮ ಆಟಗಾರರಿಗೆ ಸರಿಹೊಂದುತ್ತದೆಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಈ ಬಾರಿ ಲಖನೌ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಗೊಂಡಿದ್ದು, ಒಂದು ವೇಳೆ ಈ ಬಾರಿಯೂ ಭಾರತದಿಂದ ಲೀಗ್ ಹೊರಗೆ ನಡೆಸಲು ನಿರ್ಧರಿಸಿದರೆ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ 2ನೇ ಬಾರಿ ನಡೆದಂತಾಗುತ್ತದೆ. ಹಾಗು ಭಾರತದಲ್ಲಿ ಲೋಕಸಭೆ ಚುನಾವಣೆ ಆಯೋಜನೆಗೊಂಡಿದ್ದರಿಂದ 2009ರಲ್ಲಿ ದ.ಆಫ್ರಿಕಾದಲ್ಲಿ 2ನೇ ಆವೃತ್ತಿಯ ಐಪಿಎಲ್ ನಡೆಸಲಾಗಿತ್ತು.
ಪ್ರಸ್ತುತ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ 2022ರ ಲೀಗ್ಗೆ ‘ರೈಂಬೋ ನೇಷನ್’ ಸರಿಯಾದ ಆಯ್ಕೆ ಎನ್ನಲಾಗುತ್ತಿದೆ. ಒಂದು ವೇಳೆ ಇಲ್ಲಿಯೂ ಸಾಧ್ಯವಾಗದಿದ್ದರೆ ಶ್ರೀಲಂಕಾ ಬಿಸಿಸಿಐ ಮುಂದಿರುವ ಮತ್ತೊಂದು ಆಯ್ಕೆಯಾಗಿದೆ.