ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಮುಖ: ಗೋವಾ, ಕೇರಳ, ಮಹಾರಾಷ್ಟ್ರ ಬರುವವರಿಗೆ ಆರ್​ಟಿ-ಪಿಸಿಆರ್​ ನೆಗೆಟಿವ್​ ರಿಪೋರ್ಟ್​ ಕಡ್ಡಾಯ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಮುಖವಾಗಿರುವ ಹಿನ್ನೆಲೆ ಗೋವಾ, ಕೇರಳ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಗಡಿಭಾಗದಿಂದ ಬರುವವರಿಗೆ ಆರ್​ಟಿ-ಪಿಸಿಆರ್​ ನೆಗೆಟಿವ್​ ರಿಪೋರ್ಟ್​ ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ.
ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗುತ್ತಿದ್ದ ವೇಳೆ ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.‌ ಪ್ರಮುಖವಾಗಿ ಗೋವಾ, ಕೇರಳ, ಮಹಾರಾಷ್ಟ್ರ ಸೇರಿದಂತೆ ಈ ಭಾಗದಿಂದ ಬರುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿತ್ತು.‌ ಇದೀಗ ಹಂತ ಹಂತವಾಗಿ ವಿಧಿಸಿದ್ದ ಎಲ್ಲ ನಿರ್ಬಂಧಗಳನ್ನು ತೆಗೆಯಲಾಗುತ್ತಿದೆ.
ರಾಜ್ಯ ಕೋವಿಡ್​-19 TAC ನ 155 ನೇ ಸಭೆಯಲ್ಲಿ ತಜ್ಞರ ಸಲಹೆಯಂತೆ RT-PCR ನೆಗೆಟಿವ್ ರಿಪೋರ್ಟ್ ತರುವ ಅವಶ್ಯಕತೆ ಇಲ್ಲ ಹೇಳಲಾಗಿದ್ದು, ಪ್ರಸ್ತುತ COVID-19 ಪರಿಸ್ಥಿತಿಯ ದೃಷ್ಟಿಯಿಂದ ಗೋವಾ, ಕೇರಳ ರಾಜ್ಯಗಳಿಂದ ಏರ್ ಪೋರ್ಟ್, ರೈಲ್ವೆ, ರಸ್ತೆ ಸಾರಿಗೆ ಹಾಗೂ ವೈಯಕ್ತಿಕ ವಾಹನಗಳಲ್ಲಿ ಬರುವವರು ರಿಪೋರ್ಟ್ ತರುವ ಅವಶ್ಯಕತೆ ಇಲ್ಲ. ಆದರೆ ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರವನ್ನು ತೋರಿಸಬೇಕಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!