ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಸಿಐನ ಮೂವರು ಅಧಿಕಾರಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮುಂಬೈನಲ್ಲಿರುವ ಬಿಸಿಸಿಐ ಕಚೇರಿ ಬಂದ್ ಮಾಡಲಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದ ಆವರಣದಲ್ಲಿರುವ ಕಚೇರಿಗೆ ಮೂರು ದಿನಗಳ ಕಾಲ ಬೀಗ ಬಿದ್ದಿದ್ದು, ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಸೋಂಕಿಗೆ ತುತ್ತಾದ ಸಿಬ್ಬಂದಿ ಮನೆಯಲ್ಲಿಯೇ ಕ್ವಾರೆಂಟೀನ್ ಆಗಿದ್ದಾರೆ. ಕಚೇರಿಯ ಸಿಬ್ಬಂದಿಗಳಿಗೆ ಪರೀಕ್ಷೆಗೆ ಸೂಚಿಸಲಾಗಿದೆ.