Wednesday, December 6, 2023

Latest Posts

ಜ. 12ರಿಂದ ರಾಜ್ಯಾದ್ಯಂತ ಯುವ ಸಪ್ತಾಹ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ವಾರ ಕಾಲ ಯುವ ಸಪ್ತಾಹ ಹಮ್ಮಿಕೊಳ್ಳಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

ಜ. 12ರಿಂದ 18ವರೆಗೆ ಯುವ ಸಪ್ತಾಹ ನಡೆಯಲಿದೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದವರೆಗೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಯುವ ಸಮುದಾಯಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಏನೇನು ಕಾರ್ಯಕ್ರಮಗಳಿವೆ

ಜ. 12 – ಎಲ್ಲಾ ಶಾಲೆ-ಕಾಲೇಜುಗಳಲ್ಲಿ ‘ಯುವ ಸಂಸದ್’ ಮತ್ತು ಗ್ರಾಮ ಮಟ್ಟದಲ್ಲಿ ಯುವ ಗ್ರಾಮ ಸಭೆಗಳನ್ನು ನಡೆಸುವುದು.

ಜ. 13 – ಸ್ವಾಮಿ ವಿವೇಕಾನಂದರ ವಿಚಾರಧಾರೆ, ಉದ್ದೇಶಗಳು ಮತ್ತು ತಾತ್ವಿಕ ಆಶಯಗಳ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ.

ಜ. 14 – ಪೌಷ್ಟಿಕಾಂಶ ಮತ್ತು ಆರೋಗ್ಯ ಶಿಬಿರಗಳು, ರಸ್ತೆ ಸುರಕ್ಷತೆ ಕುರಿತು ಜಾಗೃತಿ.

ಜ. 15 – ಸ್ಥಳೀಯ ಗ್ರಾಮೀಣ ಕ್ರೀಡಾ ಉತ್ಸವ.

ಜ. 16 – ಮಾದಕ ವ್ಯವನ, ಮಹಿಳಾ ದೌರ್ಜನ್ಯ ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವ ಬಗ್ಗೆ ಜಾಗೃತಿ.

ಜ. 17 – ಕಾನೂನು ನೆರವು ಸೇವೆಗಳ ಬಗ್ಗೆ ಜಾಗೃತಿ.

ಜ. 18 – ಕೌಶಲ ಕರ್ನಾಟಕದ ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣೆ ತಂತ್ರಜ್ಞಾನ , ಉದ್ಯಮಶೀಲತರ ಅಭಿವೃದ್ಧಿ ಮತ್ತು ಸಾಫ್ಟ್ ಸ್ಕಿಲ್ ತರಬೇತಿ ಕುರಿತು ಕೌಶಲ ಅಭಿವೃದ್ಧಿ ಕುರಿತು ತರಬೇತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!