ಮತ್ತೆ ಕೊರೋನಾ ಹೆಚ್ಚಳ: ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿಢೀರ್ ಏರಿಕೆಯಾಗುತ್ತಿದ್ದು, ಇದು ಕೊರೋನಾ 4ನೇ ಅಲೆಗೆ ಆರಂಭವೇ ಎಂಬ ಆತಂಕದ ಕುರಿತು ಖ್ಯಾತ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ ದೇವಿ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಹೊಸ ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಭಯ ಬೇಡ ಎಚ್ಚರ ವಹಿಸಿ ಎಂದು ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ ದೇವಿ ಪ್ರಸಾದ್ ಶೆಟ್ಟಿ ಅವರು ಸಲಹೆ ನೀಡಿದ್ದಾರೆ.
ಕೋವಿಡ್-19 ನಾಲ್ಕನೇ ಅಲೆಯ ಕುರಿತು ಭಯ ಪಡುವ ಅಗತ್ಯವಿಲ್ಲ. ಕೊಂಚ ಎಚ್ಚರ ಮತ್ತು ಏಕಾಗ್ರತೆ ವಹಿಸಿದರೆ ಸಾಕು. ನಮ್ಮ ನಿಗಾ ಸೋಂಕಿಗೆ ತುತ್ತಾದವರ ಮೇಲಲ್ಲ.. ಬದಲಿಗೆ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದವರ ಮೇಲಿರಬೇಕು ಎಂದು ಹೇಳಿದ್ದಾರೆ.
ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಜನರು ಮಾಸ್ಕ್ ಧರಿಸುವುದನ್ನು ಮುಂದುವರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ಮೂರನೇ ಅಲೆಯ ಅಷ್ಟು ಗಂಭೀರವಾಗಿರಲಿಲ್ಲ, ಆದ್ದರಿಂದ ಭಯ ಪಡುವ ಅಗತ್ಯವಿಲ್ಲ. ನಾವು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಖ್ಯೆಯನ್ನು ಮಾತ್ರ ನೋಡಬೇಕು. ಒಂದು ಲಕ್ಷ ಜನರು ಅಥವಾ 50,000 ಜನರು ಸೋಂಕಿಗೆ ತುತ್ತಾಗುತ್ತಾರೆ ಎಂದರೆ ಏನೂ ಅರ್ಥವಲ್ಲ.. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ ಎಂದು ದೇವಿಶೆಟ್ಟಿ ಹೇಳಿದರು.
ಇಡೀ ದೇಶವು ಸೋಂಕಿಗೆ ತುತ್ತಾಗಬಹುದು, ಆದರೆ ಆಸ್ಪತ್ರೆಯಲ್ಲಿ ಯಾವುದೇ ಕೋವಿಡ್ ರೋಗಿಗಳಿಲ್ಲದಿದ್ದರೆ, ಯಾವುದೇ ಆತಂಕವಿಲ್ಲ. ಆದ್ದರಿಂದ ಆಸ್ಪತ್ರೆಯಲ್ಲಿನ ರೋಗಿಗಳ ಸಂಖ್ಯೆಯ ಮೇಲೆ ನಿಗಾ ವಹಿಸಬೇಕು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!