Thursday, July 7, 2022

Latest Posts

ಚಲಿಸುತ್ತಿದ್ದ ರೈಲಿನಲ್ಲೇ ದುಷ್ಕೃತ್ಯ: ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಲಿಸುತ್ತಿದ್ದ ರೈಲಿನಲ್ಲೇ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಹರಿಯಾಣದ ದಂಗರ್​ ಗ್ರಾಮದ ನಿವಾಸಿ ಮೋನು ಎಂಬಾತ ತನ್ನ ಮಗಳನ್ನ ಕಬಡ್ಡಿ ತರಬೇತಿಗೋಸ್ಕರ ಕಳೆದ ಫೆಬ್ರವರಿ ತಿಂಗಳಲ್ಲಿ ಇಂದೋರ್​ನಲ್ಲಿರುವ ಅಕಾಡೆಮಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಕೆಲ ತಿಂಗಳ ನಂತರ ಅಲ್ಲಿನ ವಾತಾವರಣ ಸರಿ ಬಾರದ ಕಾರಣ ತಮ್ಮ ಮಗಳನ್ನ ವಾಪಸ್ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ರೈಲಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಆರೋಪಿ ನಶೆ ಬರುವ ಪದಾರ್ಥ ನೀಡಿದ್ದು, ಇದರ ಬೆನ್ನಲ್ಲೇ ಆಕೆಯನ್ನ ಶೌಚಾಲಯದೊಳಗೆ ಕರೆದುಕೊಂಡು ಹೋಗಿ, ದುಷ್ಕೃತ್ಯವೆಸಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಾಯಿ ದೂರು ದಾಖಲು ಮಾಡಿದ್ದು, ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, 12ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳು ಕಬಡ್ಡಿ ಆಟಗಾರ್ತಿ ಆಗಿದ್ದು, ಆಕೆಯ ಮೇಲೆ ರೈಲಿನಲ್ಲಿ ಅತ್ಯಾಚಾರ ನಡೆದಿದೆ. ಈ ವೇಳೆ ಆರೋಪಿ ಬೆದರಿಕೆ ಸಹ ಹಾಕಿದ್ದಾನೆಂದು ಸಂತ್ರಸ್ತೆಯ ತಾಯಿ ಆರೋಪ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss