ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಹೊಸ ಗೈಡ್ ಲೈನ್ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರ ಜಿಲ್ಲೆಯ ಕಚೇರಿಗಳು, ವಿದ್ಯಾಸಂಸ್ಥೆ, ಕಾಲೇಜುಗಳು ಹಾಗೂ ಅಪಾರ್ಮೆಂಟ್ ಗಳಲ್ಲಿ ಕೋವಿಡ್-19 ಪರೀಕ್ಷೆ, ಐಸೋಲೇಷನ್, ಚಿಕಿತ್ಸೆ ಹಾಗೂ ಕ್ವಾರಂಟೈನ್ ಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಯನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದೆ.

ವಸತಿ ಸಮುಚ್ಛಯ, ಶಾಲೆ , ಅಪಾರ್ಟ್ ಮೆಂಟ್ ಗಳ ಮಾರ್ಗಸೂಚಿಗಳು

  • 3-5 ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸುವುದು.
  • 15ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ಕಂಡು ಬಂದ್ರೇ, ಸ್ಥಳೀಯ ಆರೋಗ್ಯ ಪ್ರಾಧಿಕಾರದಿಂದ ಅಪಾರ್ಟ್ ಮೆಂಟ್ ನಲ್ಲಿನ ಎಲ್ಲರನ್ನು ಸಂಪೂರ್ಣವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು.
  • ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿಯ ಅನ್ವಯ ಹಾಗೂ ಪಾಸಿಟಿವ್ ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್, ಸಿಸಿಸಿ, ಆಸ್ಪತ್ರೆಗೆ ದಾಖಲಿಸುವಂತೆ ಕ್ರಮವಹಿಸುವುದು.
  • Rapid ಆಂಟಿಜೆನ್ ಟೆಸ್ಟ್ ಪಾಸಿಟಿವ್ ಪ್ರಕರಣಗಳಿಂದ ಹೆಚ್ಚುವರಿಯಾಗಿ ಆರ್ ಟಿ -ಪಿಸಿಆರ್ ಪರೀಕ್ಷೆಗೆ ವರದಿಯನ್ನು ಸಂಗ್ರಹಿಸುವುದು.
  • ಆರ್ ಟಿ ಪಿಸಿಆರ್ ಪರೀಕ್ಷೆಗೆ ಪಾಸಿಟಿವ್ ಫಲಿತಾಂಶದ ಮಾದರಿಗಳ ಸಿಟಿ ವ್ಯಾಲ್ಯು >25 ಇದ್ದಲ್ಲಿ, ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸುವುದು.
  • ಸೋಂಕಿನ ಲಕ್ಷಣ ರಹಿತರಿಗೆ ದೊಡ್ಡ ಪ್ರಮಾಣದ, ಸಾಮೂಹಿಕ ಕೋವಿಡ್-19 ಪರೀಕ್ಷೆಗಳನ್ನು ಶಿಫಾರಸ್ಸು ಮಾಡುವಂತಿಲ್ಲ. ಆದ್ರೇ ಪ್ರಾಥಮಿಕ ಸಂಪರ್ಕಿತರಿಗೆ ಇದು ಅನ್ವಯವಾಗುವುದಿಲ್ಲ
  • ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
  • ಕಚೇರಿಗಳು, ವಿದ್ಯಾಸಂಸ್ಥೆಗಳು, ಕಾಲೇಜುಗಳನ್ನು ಮುಚ್ಚುವ ಅವಶ್ಯಕತೆ ಇಲ್ಲ

     

    ಶಾಲೆಗಳಲ್ಲಿ ಅನುಸರಿಸಬೇಕಾದ ಕೋವಿಡ್ ನಿಯಂತ್ರಣ ಮಾರ್ಗಸೂಚಿ

  • ಕೋವಿಡ್-19ರ ಲಕ್ಷಣಗಳಿದ್ದರೆ ರಜೆ ಮಾಡಬೇಕು .
  • ಕೋವಿಡ್ ಲಕ್ಷಣವಿರುವಂತ ವಿದ್ಯಾರ್ಥಿಯನ್ನು Rapid ಆಂಟಿಜೆನ್ ಪರೀಕ್ಷೆಗೆ ಒಳಪಡಿಸುವುದು. ಪಾಸಿಟಿವ್ ಬಂದಲ್ಲಿ, ಶಿಷ್ಟಾಚಾರದ ಅನ್ವಯ ಐಸೋಲೇಷನ್ ನಲ್ಲಿ ಇರಿಸುವುದು
  • Rapid ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ರೇ, ಆರ್ ಟಿ ಪಿಸಿಆರ್ ಪರೀಕ್ಷೆಗೆ ಮಾದರಿ ಸಂಗ್ರಹಿಸಿ, ಐಸೋಲೇಷನ್ ನಲ್ಲಿ ಇರಿಸುವುದು.
  • ಕ್ಲಸ್ಟರ್, ಸಾಂಕ್ರಾಮಿಕ ಸ್ಪೋಟಗಳು ವರದಿಯಾದಲ್ಲಿ, ರೋಗ ಲಕ್ಷಣಗಳಿರುವವರಿಗೆ Rapid ಆಂಟಿಜೆನ್ ಪರೀಕ್ಷೆ ಮಾಡುವುದು.
  • ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್, ಸಿಸಿಸಿ, ಆಸ್ಪತ್ರೆಗೆ ದಾಖಲಿಸುವಲ್ಲಿ ಕ್ರಮಕೈಗೊಳ್ಳುವುದು.
  • ಶಾಲೆಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾದ ಕೊಠಡಿಗಳನ್ನು ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸುವುದು.
  • ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲಿಸುವುದು. ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಬಳಸುವುದು.
  • ಜ್ವರ, ನೆಗಡಿ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಗಳಿರುವವರನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲು ಶಿಫಾರಸ್ಸು ಮಾಡವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!