ಕೇರಳದ ತಿರುವನಂತಪುರಂನ ಸೆಂಟ್ರಲ್​ ಜೈಲಿನ 262 ಕೈದಿಗಳಿಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳದ ತಿರುವನಂತಪುರಂನ ಪೂಜಾಪ್ಪುರ ಸೆಂಟ್ರಲ್​ ಜೈಲಿನ 262 ಕೈದಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಕಳೆದ 3 ದಿನಗಳಲ್ಲಿ ಒಟ್ಟು 936 ಕೈದಿಗಳಿಗೆ ಆಯಂಟಿಜೆನ್​ ಟೆಸ್ಟ್​ ಮಾಡಲಾಗಿತ್ತು. ಅದರಲ್ಲಿ 262 ಜನರಿಗೆ ಕೊರೊನಾ ದೃಢಪಟ್ಟಿದೆ.
ಸೋಂಕಿತರನ್ನು ಜೈಲಿನಲ್ಲಿಯೇ ಒಂದು ಪ್ರತ್ಯೇಕ ಸೆಲ್​ಗೆ ಹಾಕಲಾಗಿದೆ. ಅವರ ಚಿಕಿತ್ಸೆ ಮತ್ತು ಆರೈಕೆಗಾಗಿ ವಿಶೇಷ ವೈದ್ಯರನ್ನು ನೇಮಕ ಮಾಡಬೇಕು ಎಂದು ಜೈಲು ಅಧೀಕ್ಷಕರು ಸೂಚಿಸಿದ್ದಾರೆ.
ಇನ್ನು ಕಣ್ಣೂರು ಕೇಂದ್ರ ಕಾರಾಗೃಹದಲ್ಲಿಯೂ 10 ಕೈದಿಗಳಿಗೆ ಸೋಂಕು ತಗುಲಿದೆ. ಕೊರೊನಾ ಪಾಸಿಟಿವ್ ಬಂದವರನ್ನು ಕೋಳಿಕ್ಕೋಡ್ ಮತ್ತು ಕಾಸರಗೋಡಿನ ಜೈಲಿನಲ್ಲಿ ಇಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!