ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೇಶದಲ್ಲಿ ಕೊರೋನಾತ್ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದಂತೆ ರಾಜ್ಯದಲ್ಲೂ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದ್ದು, ಇದೀಗ ಕೊಪ್ಪಳ ಜಿಲ್ಲೆಯಲ್ಲಿ 5 ತಿಂಗಳ ಬಳಿಕ ಮೊದಲ ಕೇಸ್ ಪತ್ತೆಯಾಗಿದ್ದು, 26 ವರ್ಷದ ಯುವತಿಗೆ ಸೋಂಕು ಧೃಡವಾಗಿದೆ.
ಈಕೆ ಅಮೆರಿಕದಿಂದ ಬಂದಿದ್ದು,ಕೊರೋನಾ ಸೋಂಕು ಧೃಡವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಟೆಸ್ಟ್ ವೇಳೆ ಸೋಂಕು ಧೃಡವಾಗಿದೆ. ಯುವತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಿವಾಸಿಯಾಗಿದ್ದು, ಸದ್ಯ ಈಕೆಯನ್ನು ಹೋಮ್ ಐಸೋಲೇಷನ್ ನಲ್ಲಿಡಲಾಗಿದೆ.