Friday, February 3, 2023

Latest Posts

ನಾನು ಒಂದಿಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲ: ‘ಮಹಾ’ ಸರಕಾರದ ವಿರುದ್ಧ ಗುಡುಗಿದ ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರ ನಿರ್ಣಯವನ್ನ ಅಂಗೀಕರಿಸಿದ್ದು, ಈ ಕುರಿತು ಮಾತನಾಡಿದ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ , ನಾನು ಒಂದಿಂಚು ಭೂಮಿಯನ್ನು ಸಹ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

ಶಿಂಧೆ ಸರ್ಕಾರವು ಇಂತಹ ಕ್ರಮಗಳಿಗೆ ಮೊರೆ ಹೋಗುತ್ತಿದೆ. ಅವರ ವಾದಗಳು ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿದ್ದು, ತುಂಬಾ ದುರ್ಬಲವಾಗಿದೆ ಎಂದು ಹೇಳಿದರು.

ಆದ್ರೆ ನಾವು ಕರ್ನಾಟಕ ಸರ್ಕಾರವು ಪ್ರತಿ ಇಂಚು ಭೂಮಿಯನ್ನು ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ, 1956ರ ಆಧಾರದ ಮೇಲೆ ರಾಜ್ಯಗಳನ್ನ ಸಂಘಟಿಸಲಾಯಿತು. ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿರುವ ಅವರ ಪ್ರಕರಣವು ತುಂಬಾ ದುರ್ಬಲವಾಗಿರುವುದರಿಂದ ಮಹಾರಾಷ್ಟ್ರದ ರಾಜಕಾರಣಿಗಳು ಇಂತಹ ಕೆಲಸಗಳನ್ನ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!