ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೀಗ ಅವರ ಪುತ್ರಿ ಸನಾ, ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್(ಸಿಎಬಿ)ನ ಅಧಿಕಾರಿಗಳು ಹಾಗೂ ಗಂಗೂಲಿ ಅವರ ಕುಟುಂಬದ ಸದಸ್ಯರಿಗೂ ಕೋವಿಡ್ ದೃಢಪಟ್ಟಿದೆ.
ಗಂಗೂಲಿ ಅವರ ಚಿಕ್ಕಪ್ಪ ಸಿಎಬಿ ಖಜಾಂಚಿ ಆಗಿರುವ ದೇಬಾಶಿಶ್ ಗಂಗೂಲಿ ಅವರಿಗೆ ಸೋಂಕು ದೃಢಗೊಂಡಿದೆ.ಬಂಗಾಳದ ರಣಜಿಯ ಮಾಜಿ ಕ್ರಿಕೆಟ್ ಆಟಗಾರ ಸುವದೀಪ್ ಗಂಗೂಲಿ ಹಾಗೂ ಅವರ ಪತ್ನಿ ಜೂಯಿ ಗಂಗೂಲಿಗೂ ಪಾಸಿಟಿವ್ ಆಗಿದ್ದು, ಗಂಗೂಲಿ ಅವರ ಸಹೋದರ ಸ್ನೇಹಶಶಿ ಹಾಗೂ ಅವರ ಪತ್ನಿಗೂ ದೃಢಗೊಂಡಿದೆ.
ಎಲ್ಲರೂ ಐಸೋಲೇಷನ್ಗೊಳಗಾಗಿದ್ದಾರೆ. ಇವರೆಲ್ಲರ ಮೇಲೂ ಕೋಲ್ಕತ್ತಾದ ಖಾಸಗಿ ಆಸ್ಪತ್ರೆ ವೈದ್ಯರು ನಿಗಾ ಇಟ್ಟಿದ್ದಾರೆಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಡೆಲ್ಟಾ ಪ್ಲಸ್ ಸೋಂಕಿಗೊಳಗಾಗಿದ್ದಸೌರವ್ ಗಂಗೂಲಿ ಕಳೆದ ಮೂರು ದಿನಗಳ ಹಿಂದೆ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.