ಮತ್ತೆ ಹೆಚ್ಚುತ್ತಿದೆ ಕೊರೋನಾ ಪ್ರಮಾಣ: ಈ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ದೇಶದ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆ ಅನೇಕ ರಾಜ್ಯಗಳು ಎಚ್ಚರಿಕೆ ವಹಿಸುತ್ತಿದೆ.
ಹರಿಯಾಣ ಸರಕಾರ ಕೂಡ ಕೊರೋನಾ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ .

100 ಕ್ಕಿಂತ ಹೆಚ್ಚು ಜನಸಂದಣಿ ಇರುವಲ್ಲಿ, ಜನರು ಮಾಸ್ಕ್ ಧರಿಸುವುದು ಅಗತ್ಯ ಎಂದು ಸರ್ಕಾರ ಸೂಚನೆ ನೀಡಿದೆ.

ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಜನರು ಕೋವಿಡ್ ಪ್ರೋಟೋಕಾಲ್ಗಳನ್ನ ಅನುಸರಿಸಬೇಕಾಗಿದೆ. 100ಕ್ಕಿಂತ ಹೆಚ್ಚು ಜನರ ಜನಸಂದಣಿ ಇರುವಲ್ಲಿ ಮಾಸ್ಕ್ ಧರಿಸಬೇಕಾಗುತ್ತದೆ. ಸರ್ಕಾರ ನಿರ್ದೇಶನ ನೀಡಿದ್ದು, ನಾವು ಪರೀಕ್ಷೆಯನ್ನ ಸಹ ಹೆಚ್ಚಿಸಿದ್ದೇವೆ. ಪ್ರಸ್ತುತ ರಾಜ್ಯದಲ್ಲಿ 424 ಸಕ್ರಿಯ ರೋಗಿಗಳಿದ್ದಾರೆ. ಆದಾಗ್ಯೂ, ಅವರಲ್ಲಿ ಯಾರನ್ನೂ ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!