ತಿರುಪತಿಗೆ ಬಾಯ್ ಫ್ರೆಂಡ್ ಜೊತೆ ಬಂದ ಬಾಲಿವುಡ್ ನಟಿ ಜಾನ್ವಿ ಕಪೂರ್!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಾಲಿವುಡ್ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhvi Kapoor) ಮತ್ತು ಶಿಖರ್ ಪಹಾರಿಯಾ (Shikhar Paharia) ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿದ್ದು, ಇದರ ನಡುವೆ ಇಬ್ಬರು ತಿರುಪತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜಾನ್ವಿ ಕಪೂರ್ ಮತ್ತು ಶಿಖರ್ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಒಟ್ಟಿಗೆ ವಿದೇಶ ಪ್ರಯಾಣವನ್ನೂ ಮಾಡಿದ್ದರು. ಅಲ್ಲದೇ, ಅಂಬಾನಿ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಇದೀಗ ತಿರುಪತಿಯಲ್ಲಿ ಜಾನ್ವಿ ಜೊತೆ ಶಿಖರ್ ಕಾಣಿಸಿಕೊಂಡಿದ್ದಾರೆ.

ಬಾಯ್ ಫ್ರೆಂಡ್ ಜೊತೆ ಇಂದು ಬೆಳ್ಳಂಬೆಳಗ್ಗೆ ತಿರುಪತಿಗೆ ಬಂದಿದ್ದ ಜಾನ್ವಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇಬ್ಬರೂ ತಿರುಪತಿಗೆ ಬಂದಿರುವ ಮತ್ತು ಪೂಜೆ ಸಲ್ಲಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಾನ್ವಿ ಸದ್ಯ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ಗೂ ಬಂದಿಳಿದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!