ಐಪಿಎಲ್ ಮೇಲೆ ಕೊರೋನಾ ಕರಿನೆರಳು: ಅಲರ್ಟ್ ಗಾಗಿ ಮಾರ್ಗಸೂಚಿ ಪ್ರಕಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಪಿಎಲ್(IPL 2023)​ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದ್ದು, ಈ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಹೆಚ್ಚುತ್ತಿದೆ. ಇದೀಗ ಐಪಿಎಲ್ ಗು ವೈರಸ್ ಭೀತಿ ಶುರುವಾಗಿದ್ದು, ಟೂರ್ನಿಯ ಸಂಘಟಕರು ಕೋವಿಡ್​ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ.

ಮಾರ್ಗಸೂಚಿಯ ಪ್ರಕಾರ ಐಪಿಎಲ್​ ಆಡುವ ವೇಳೆ ಯಾವುದೇ ಆಟಗಾರನಿಗೆ ಅಥವಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದರೆ ಕೂಡಲೇ ಅವರು ತಂಡವನ್ನು ತೊರೆಯಬೇಕು. ಜತೆಗೆ ಒಂದು ವಾರಗಳ ಕಾಲ ಕ್ವಾರಂಟೈನ್​ವಾಸದಲ್ಲಿರಬೇಕುಎಂದು ಐಪಿಎಲ್​ ಆಡಳಿತ ಮಂಡಳಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಜತೆಗೆ ಈ ನಿಯಮಗಳನ್ನು ಎಲ್ಲ ಫ್ರಾಂಚೈಸಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.

ಕೋವಿಡ್ ಪಾಸಿಟಿವ್ ಆದ ಆಟಗಾರನ ಟೆಸ್ಟ್ ರಿಪೋರ್ಟ್​ ಐದನೇ ದಿನ ನೆಗೆಟಿವ್ ಬಂದರೆ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 24 ಗಂಟೆಯೊಳಗೆ ನಡೆಯಲಿರುವ ಎರಡನೇ ಟೆಸ್ಟ್​ನ ವರದಿಯು ನೆಗೆಟಿವ್ ಬಂದರೆ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೀಸನ್ ವಿವಿಧ ನಗರಗಳಲ್ಲಿ ಆಯೋಜಿಸಲಾಗಿತ್ತು. ಈ ವರ್ಷ ತಂಡಗಳ ಹೋಮ್​ ಗ್ರೌಂಡ್​ನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಕೂಡ ತಮ್ಮ ತಂಡಗಳಿಗೆ ತವರಿನಲ್ಲಿ ಬೆಂಬಲ ವ್ಯಕ್ತಪಡಿಸಲು ತಯಾರಿ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!