ದೇಶಕ್ಕೆ ಕೊರೋನಾಘಾತ: ಒಂದೇ ದಿನ ಬರೋಬ್ಬರಿ 18000+ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದಲ್ಲಿ ಕೊವಿಡ್‌ ಸೋಂಕಿನ ಪ್ರಕರಣಗಳಲ್ಲಿ ದಿನೇ ದಿನೇ ಏರಿಕೆಯಾಗಿದ್ದು ಮತ್ತೆ ಕೊರೊನಾಘಾತವಾಗುವ ಆತಂಕ ಮೂಡುತ್ತಿದೆ. ಕಳೆದ 24 ಗಂಟೆಗಳಲ್ಲಿ 18 ಸಾವಿರಕ್ಕೂ ಅಧಿಕ ಕೊವಿಡ್‌ ಕೇಸ್‌ ದಾಖಲಾಗಿದ್ದು ತೀವ್ರ ಏರಿಕೆ ಕಂಡು ಬಂದಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಾದ್ಯಂತ 18,819 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ದೈನಂದಿನ ಪಾಸಿಟಿವಿಟಿ ದರವು 4.16% ಕ್ಕೆ ಏರಿಕೆಯಾಗಿದೆ. ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 1,04,555ಕ್ಕೆ ತಲುಪಿದೆ.

ಒಟ್ಟು 13,287 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಚೇತರಿಕಾ ದರವು 98.55% ದಷ್ಟಿದೆ

ದೇಶದಾದ್ಯಂತ ಒಟ್ಟೂ 197.61 ಕೋಟಿ ಲಸಿಕೆ ವಿತರಿಸಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!