ದೇಶದಲ್ಲಿ ಕೊರೋನಾ ಇಳಿಮುಖ: ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಕೋವಿಡ್‌ ಕಾಲರ್‌ ಟ್ಯೂನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್

ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಎಲ್ಲೆಡೆ ಮತ್ತೆ ಜನರ ಜೀವನ ಸಹಜ ಸ್ಥಿತಿಯತ್ತ ಸಾಗುತ್ತಿದೆ
ಹೀಗಾಗಿ ಎರಡು ವರ್ಷಗಳ ಹಿಂದೆ ಆರಂಭಿಸಲಾಗಿದ್ದ ಮೊಬೈಲ್‌ಗಳಲ್ಲಿನ ಕೋವಿಡ್‌ ಜಾಗೃತಿ ಕುರಿತ ಕಾಲರ್‌ ಟ್ಯೂನ್‌ ಅನ್ನು ಸ್ಥಗಿತಗೊಳಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ದೇಶದಲ್ಲಿ ಸೇವೆಯಲ್ಲಿರುವ ಭಾರತಿ ಏರ್ಟೆಲ್‌, ಬಿಎಸ್‌ಎನ್‌ಎಲ್‌, ರಿಲಯನ್ಸ್‌ ಜಿಯೋ ಹಾಗೂ ವೊಡಾಫೋನ್‌-ಐಡಿಯಾ ಸಂಸ್ಥೆಗಳು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ 2020ರ ಮಾರ್ಚ್‌ನಲ್ಲಿ ಈ ಜಾಗೃತಿ ಸೇವೆಯನ್ನು ಆರಂಭಿಸಿದ್ದವು. ಇದೀಗ ಕೊರೋನಾ ಇಳಿಮುಖವಾಗುತ್ತಿರುವ ಹಿನ್ನೆಲೆ ಆರೋಗ್ಯ ಸಚಿವಾಲಯ ಕಾಲರ್‌ ಟ್ಯೂನ್‌ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಮೊಬೈಲ್‌ ಕಾಲರ್‌ ಟ್ಯೂನ್‌ನಲ್ಲಿ ಕೋವಿಡ್‌ ಬಗ್ಗೆ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿತ್ತು. ನಂತರ ಈ ಸಂದೇಶವನ್ನು ಬದಲಾಯಿಸಿ ವ್ಯಾಕ್ಸಿನೇಷನ್‌ ಕುರಿತು ಮಾಹಿತಿ ನೀಡಲಾಗುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!