ಕರಾವಳಿಯ ಮಠಾಧೀಶರ ಕಣ್ಣಂಚಲ್ಲೂ ಹನಿಗೂಡಿಸಿತು ‘ದಿ ಕಾಶ್ಮೀರ್ ಫೈಲ್ಸ್’…

ಹೊಸದಿಗಂತ ವರದಿ, ಮಂಗಳೂರು:

ನಗರದ ಸಿಟಿ ಸೆಂಟರ್ ಸಿನೆಪೊಲೀಸ್ ಚಿತ್ರಮಂದಿರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು ಸೋಮವಾರ `ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ವೀಕ್ಷಿಸಿದರು.
ವಿಶ್ವಹಿಂದು ಪರಿಷತ್ ಈ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಾವೂರು ಆದಿಚುಂಚನಗಿರಿ ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಕದ್ರಿ ಯೋಗೀಶ್ವರ (ಜೋಗಿ) ಮಠದ ಶ್ರೀ ನಿರ್ಮಲನಾಥ್‌ಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ, ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಒಡಿಯೂರಿನ ಸಾಧ್ವಿ ಮಾತಾನಂದಮಯಿ, ಚಿಲಿಂಬಿ ಮಠದ ವಿದ್ಯಾನಂದ ಸರಸ್ವತಿ, ಸ್ವಾಮೀಜಿಗಳ ಶಿಷ್ಯ ವರ್ಗ ಚಿತ್ರ ವೀಕ್ಷಣೆ ಮಾಡಿದರು.
ಸಿನೆಮಾ ವೀಕ್ಷಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಿಸಿದಾಗ ರಕ್ತ ಕುದಿಯುತ್ತದೆ. ಹಿಂದಿನ ಸರಕಾರಗಳು ಸಮಾಜವನ್ನು ಯಾವ ರೀತಿಯಲ್ಲಿ ನೋಡಿದರು, ಭಯೋತ್ಪಾದನೆಯ ಕರಿನೆರಳಿನ ಛಾಯೆ ಭಾರತದ ಮೇಲೆ ಹೇಗೆ ಬಿತ್ತು, ಪಾಕಿಸ್ತಾನ ಕುಮ್ಮಕ್ಕು ನೀಡಿ ಹೇಗೆ ಭಯೋತ್ಪಾದನೆಯನ್ನು ಬೆಳೆಸಿತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನೈಜ ಘಟನೆ ಆಧಾರಿತವಾಗಿ ಚಿತ್ರ ನಿರ್ಮಿಸಿದ ನಿರ್ದೇಶಕರಿಗೆ ಹ್ಯಾಟ್ಸಪ್ ಹೇಳಬೇಕು ಎಂದರು.
ಇಂತಹಾ ಪರಿಸ್ಥಿತಿ ಇಲ್ಲಿಗೆ ನಿಲ್ಲಬೇಕು, ನಾಳೆ ಕೊಡಗು, ಕೇರಳ ಫೈಲ್ಸ್ ಬರುವಂತಾಗಬಾರದು. ನಾಳೆ ನಮಗೂ ಇಂತಹಾ ಸ್ಥಿತಿ ಬರಬಾರದು ಎಂದಾದರೆ ಈ ಚಿತ್ರ ನೋಡಿ ಹಿಂದುಗಳು ಜಾಗೃತರಾಗಬೇಕು ಎಂದರು.
ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳದ ಭುಜಂಗ ಕುಲಾಲ್, ಪುನೀತ್ ಅತ್ತಾವರ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!