ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ (ಜ.24) 655 ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೇ ವೇಳೆ 825 ಮಂದಿ ಸೋಮವಾರ ಸೋಂಕು ಮುಕ್ತರಾಗಿದ್ದಾರೆ. ಮೂರು ಸಾವು ಸಂಭವಿಸಿದೆ. ಈ ಪೈಕಿ ಇಬ್ಬರು ಹೊರ ಜಿಲ್ಲೆಯವರು ಎಂದು ಇಲಾಖೆ ಹೇಳಿದೆ.
ದಕ್ಷಿಣ ಕನ್ನಡದಲ್ಲಿ 5,455 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ.10.91 ಆಗಿದೆ. ಜಿಲ್ಲೆಯಲ್ಲಿ ಈ ತನಕ ಒಟ್ಟು 94,109 ಮಾಸ್ಕ್ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ರೂ.1,13,86,680 ದಂಡ ವಸೂಲು ಮಾಡಲಾಗಿದೆ.