ದೇಶದಲ್ಲಿ ಒಮಿಕ್ರಾನ್​ ಉಪ ಪ್ರಭೇದ BA2 ಪತ್ತೆ: ಆರು ಮಕ್ಕಳು ಸಹಿತ 16 ಮಂದಿಯಲ್ಲಿ ವೈರಸ್ ದೃಢ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಕೊರೋನಾ ಜೊತೆಗೆ ಒಮಿಕ್ರಾನ್ ಸಂಚಲನ ಮೂಡಿಸುತ್ತಿದೆ. ಇದರ ಮದ್ಯೆ ಇದೀಗ ಇದರ ಉಪಪ್ರಭೇದವಾಗಿರುವ BA2 ವೈರಸ್ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಮಧ್ಯಪ್ರದೇಶದ ಇಂದೋರ್​​ನಲ್ಲಿ ಆರು ಮಕ್ಕಳು ಸೇರಿದಂತೆ 16 ಮಂದಿಯಲ್ಲಿ ಒಮಿಕ್ರಾನ್​ ಉಪ ಪ್ರಭೇದವಾಗಿರುವ BA2 ಪತ್ತೆಯಾಗಿದೆ.
ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವವರಲ್ಲಿ BA2 ರೋಗ ಲಕ್ಷಣಗಳು ಇದ್ದು, ಇದರಿಂದ ಯಾವುದೇ ರೀತಿಯ ಹೆಚ್ಚಿನ ತೊಂದರೆ ಇಲ್ಲವೆಂದು ತಿಳಿದುಬಂದಿದೆ.
ಇನ್ನು BA2 ಸೋಂಕು ಕಾಣಿಸಿಕೊಂಡಿರುವ ಮೂವರು ವಯಸ್ಕರರಿಗೆ ಈಗಾಗಲೇ ಕೋವಿಡ್​ ಲಸಿಕೆ ನೀಡಲಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ಬೂಸ್ಟರ್ ಡೋಸ್ ಸಹ ಪಡೆದುಕೊಂಡಿದ್ದಾರೆ. ಹೀಗಾಗಿ ಶ್ವಾಸಕೋಶದಲ್ಲಿ ಶೇ. 5ರಷ್ಟು ಸೋಂಕು ಮಾತ್ರ ಕಾಣಿಸಿಕೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!