ಹೊಸದಿಗಂತ ವರದಿ,ಕಲಬುರಗಿ:
ಕಲಬುರಗಿ ಹೊರವಲಯದ ಕೇಂದ್ರಿಯ ವಿಶ್ವವಿದ್ಯಾಲಯದ 18 ವಿದ್ಯಾರ್ಥಿಗಳಿಗೆ ಕೋವಿಡ ಸೋಂಕು ತಗುಲಿರುವುದು ಸೋಮವಾರ ದೃಡಪಟ್ಟಿದೆ.
ಬೇರೆ ಬೇರೆ ಜಿಲ್ಲೆಗಳಿಂದ ಬಂದಂತಹ ವಿದ್ಯಾರ್ಥಿ ಗಳಲ್ಲಿ ಸೋಂಕು ದೃಡವಾಗಿದ್ದು, ಕನಾ೯ಟಕ ಕೇಂದ್ರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಕೋರೋನಾ ಸೋಂಕು ಸ್ಪೋಟಗೊಂಡಿದೆ.
ಈ ವಿಷಯದಲ್ಲಿ ಮಾತನಾಡಿದ ಕಲಬುರಗಿ ಡಿ.ಎಚ. ಒ.ಶರಣಬಸಪ್ಪಾ ಗಣಜಲಖೇಡ, ವಿವಿಧ ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿ ಗಳಿಗೆ ಸೋಂಕು ತಗುಲಿದೆ. ಅವರ ಸಂಪಕ೯ದಲ್ಲಿ ಬಂದವರಿಗೆ ಕೋವಿಡ ಪರೀಕ್ಷೆ ಮಾಡಲಾಗಿದೆ ಎಂದರು.
ವಿವಿ,ಯಲ್ಲಿ ಒಂದು ಐಸೋಲೇಶನ್ ಸೆಂಟರ ಕೂಡ ತೆಗೆಯಲಾಗಿದೆ. ಎಲ್ಲಾ ವಿದ್ಯಾಥಿ೯ಗಳಿಗೆ ಅಲ್ಲೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕೋವಿಡ ಪಾಸಿಟಿವ್ ಬಂದ ಮೂವರ ವಿದ್ಯಾರ್ಥಿ ಗಳ ಆರೋಗ್ಯದಲ್ಲಿ ಎರುಪೇರಾದ ಕಾರಣ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.