ಚಿರತೆ ದಾಳಿಗೆ ಹಸು ಬಲಿ

ಹೊಸದಿಗಂತ ವರದಿ,ಕಲಬುರಗಿ:

ಚಿರತೆಯ ದಾಳಿಗೆ ಅಮಾಯಕ ಹಸುವೊಂದು ಬಲಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಮಾನಾಯಕ ತಾಂಡದಲ್ಲಿ ನಡೆದಿದೆ.

ರಾಮಾನಾಯಕ ತಾಂಡಾದ ನಿವಾಸಿ, ರಮೇಶ್ ಜಾಧವ ಅವರಿಗೆ ಸೇರಿದ ಹಸುವಾಗಿದ್ದು,ಹೊಲದಲ್ಲಿ ಹಸುವನ್ನು ಮೇಯಲು ಬಿಟ್ಟಾಗ ಈ ಘಟನೆ ಜರುಗಿದೆ.
ಗುಡ್ಡಗಾಡು ಪ್ರದೇಶದಲ್ಲಿರುವ ರಾಮಾನಾಯಕ ತಾಂಡಾವಾಗಿದ್ದು,ಚಿರತೆ ದಾಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಪೋಲಿಸರು ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!