ಹೊಸದಿಗಂತ ವರದಿ, ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 278 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.
ಶುಕ್ರವಾರ ಕಾರವಾರದಲ್ಲಿ 85, ಅಂಕೋಲಾದಲ್ಲಿ 41, ಕುಮಟಾ 27, ಹೊನ್ನಾವರ 50, ಭಟ್ಕಳ 11, ಶಿರಸಿ 19, ಸಿದ್ಧಾಪುರ 15, ಯಲ್ಲಾಪುರ 10, ಮುಂಡಗೋಡ 16 ಮತ್ತು ಜೊಯಿಡಾದಲ್ಲಿ 4 ಜನರಲ್ಲಿ ಕೋವೀಡ್ ಸೋಂಕು ದೃಡಪಟ್ಟಿದ್ದು 30 ಜನರು ಸೋಂಕಿನಿಂದ ಗುಣಮಮಖರಾಗಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 1018 ಕ್ಕೆ ತಲುಪಿದ್ದು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಅತಿ ಹೆಚ್ಚು 479 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ಅಂಕೋಲಾ ತಾಲೂಕಿನಲ್ಲಿ ಶುಕ್ರವಾರ 41 ಜನರಲ್ಲಿ ಸೋಂಕು ಕಂಡು ಬಂದಿದ್ದು ಅದರಲ್ಲಿ ಪಟ್ಟಣದ ಕೆ.ಎಲ್. ಇ ಹಾಸ್ಟೆಲಿನ 22 ಜನ ಮಹಿಳೆಯರಲ್ಲಿ ಕೋವೀಡ್ ಸೋಂಕು ದೃಡಪಟ್ಟಿರುವುದಾಗಿ ತಿಳಿದು ಬಂದಿದೆ.