ರಾಜ್ಯದಲ್ಲಿ ಇಂದು 5,339 ಮಂದಿಗೆ ಕೊರೋನಾ ಸೋಂಕು, ಪಾಸಿಟಿವಿಟಿ ದರ 4.14%

ಹೊಸದಿಗಂತ ಡಿಜಿಟಲ್ ಡೆಸ್ಕ್

ರಾಜ್ಯದಲ್ಲಿ ಇಂದು 5,339 ಮಂದಿಗೆ ಕೋವಿಡ್ ದೃಢಪಟ್ಟಿದೆ. ಕೋವಿಡ್ ನಿಂದಾಗಿ 48 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರಿನಲ್ಲಿ 2,161 ಸೇರಿ ಕರ್ನಾಟಕದಲ್ಲಿ 5,339 ಮಂದಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿರೋದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಶೇ.4.14ರಷ್ಟು ಪಾಸಿಟಿವಿಟಿ ದರವಿದೆ. 16,749 ಮಂದಿ ಸೋಂಕಿತರು ಗುಣಮುಖರಾದ ಕಾರಣ, ಬೆಂಗಳೂರಿನಲ್ಲಿ 24 ಸಾವಿರ ಸೇರಿದೆ ರಾಜ್ಯದಲ್ಲಿ 60,956 ಸಕ್ರೀಯ ಸೋಂಕಿತರು ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!