ರಾಜ್ಯದಲ್ಲಿ 10 ಕೋಟಿ ದಾಟಿದ ಕೊರೋನಾ ಲಸಿಕೆ: ಹರ್ಷ ವ್ಯಕ್ತಪಡಿಸಿದ ಸಚಿವ ಸುಧಾಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊರೋನಾ ವಿರುದ್ಧ ಹೋರಾಡುವಲ್ಲಿ ರಾಜ್ಯದಲ್ಲಿ ಲಸಿಕಾ ಅಭಿಯಾನ ಹಂತ -ಹಂತವಾಗಿ ಹೆಚ್ಚುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಸುಮಾರು 10 ಕೋಟಿ ಡೋಸ್​​​ ವ್ಯಾಕ್ಸಿನ್​ ಹಾಕಿ ಪೂರ್ಣಗೊಳಿಸಲಾಗಿದೆ.
ಈ ಕುರಿತು ಟೀಟ್ವ್ ಮೂಲಕ ಹರ್ಷ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಸುಧಾಕರ್, ಇಂದು 10 ಕೋಟಿ ಕೋವಿಡ್ ಡೋಸ್ ಪೂರ್ಣಗೊಳಿಸಿದ್ದು, ಈ ಮೈಲಿಗಲ್ಲು ಸಾಧಿಸಲು ನಮಗೆ 1 ವರ್ಷ, 39 ದಿನಗಳು ಬೇಕಾಯಿತು. ಈ ಅದ್ಭುತ ಸಾಧನೆಗಾಗಿ ಸಹಕರಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಡೋಸ್​​ ಶೇ.100 ರಷ್ಟು ಹಾಗೂ ಎರಡನೇ ಡೋಸ್ ಲಸಿಕೆ ಶೇ.93% ರಷ್ಟು ಪೂರ್ಣಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!