ಟೌನ್‌ಹಾಲ್ ಎದುರು ಹಿಂಜಾವೇ ಪ್ರತಿಭಟನೆ: ಹರ್ಷ ಹತ್ಯೆಗೆ ಸಹಸ್ರಾರು ಕೊರಳುಗಳ ಖಂಡನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಶಿವಮೊಗ್ಗದ ವಿಶ್ವ ಹಿಂದು ಪರಿಷತ್ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆಯನ್ನು ಖಂಡಿಸಿ, ಹಿಂದು ಜಾಗರಣ ವೇದಿಕೆ ಬೆಂಗಳೂರು ಮಹಾನಗರ ವತಿಯಿಂದ ನಗರದ ಟೌನ್‌ಹಾಲ್ ಎದುರು ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಸಾವಿರಾರು ಮಂದಿ ಈ ಖಂಡನಾ ಸಭೆಯಲ್ಲಿ ಭಾಗವಹಿಸಿ, ಹಿಂದುತ್ವಕ್ಕಾಗಿ ಸಂಭವಿಸಿದ ಈ ಸಾವಿಗೆ ನ್ಯಾಯ ದೊರಕಿಸಿಕೊಂಡುವಂತೆ ಒತ್ತಾಯಿಸಿದರು.

ಹಿಂದು ಜಾಗರಣ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಹಿಜಾಬ್ ಹೆಸರಿನಲ್ಲಿ ಸಮಾಜವನ್ನು ಒಡೆದು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಕೃತ್ಯ ನಡೆಯುತ್ತಿದೆ. ಅಮಾನಯವಾಗಿ ಹಿಂದು ಯುವಕ ಹರ್ಷ ಅವರ ಹತ್ಯೆ ಮಾಡಲಾಗಿದೆ. ಇದನ್ನು ಯಾರೂ ಒಪ್ಪುವುದಿಲ್ಲ. ಇದಕ್ಕೆ ಪ್ರತಿಯಾಗಿ ಹಿಂದುಗಳು ಸುಮ್ಮನೆ ಇರುವುದಿಲ್ಲ. ಕೋಮುವಾದ ಉಂಟು ಮಾಡಿ ಹಿಂದು ಸಮಾಜವನ್ನು ಮುಟ್ಟಲು ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.

ಹಿಂಜಾವೇ ರಾಜ್ಯ ಕಾರ್ಯದರ್ಶಿ ಉಲ್ಲಾಸ್ ಕೆ.ಟಿ. ಮಾತನಾಡಿ, ಉತ್ತರ ಪ್ರದೇಶದಲ್ಲಿ ಎಸ್‌ಡಿಪಿಐ ಅನ್ನು ಭಯೋತ್ಪಾದನಾ ಸಂಘಟನೆ ಎಂದು ನಿಷೇಧಿಸಲಾಗಿದೆ. ಈಗ ಪಿಎಫ್ಐ ಹೆಸರಿನಲ್ಲಿ ಮತ್ತೆ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದೆ. ಅಮಾಯಕರನ್ನು ಕೊಲ್ಲುತ್ತಿದೆ. ಗೋರಕ್ಷಣೆ ಮಾಡಿದ್ದಕ್ಕೆ ಹತ್ಯೆ ನಡೆಸುತ್ತಿದ್ದಾರೆ. ಹರ್ಷ ಅವರ ಮನೆಯವರು ತಮ್ಮ ಮಗನನ್ನು ಶ್ರೀರಾಮನ ಕಾರ್ಯಕ್ಕೆ ಕಳುಹಿಸಿದ್ದಾಗಿ ಹೇಳಿದ್ದಾರೆ. ಆದರೆ ಹಿಂದು ಕಾರ್ಯಕರ್ತರ ಸಾವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು.

ಹಿಂದು ಕಾರ್ಯಕರ್ತರನ್ನು ಕೊಲ್ಲುತ್ತಿರುವುದು ಭಯೋತ್ಪಾದನಾ ಕೃತ್ಯ. ಇದರ ಮೂಲಕ ಪಿಎಫ್ಐ ಸಂಘಟನೆ ಹಿಂದು ಸಮಾಜವನ್ನು ಹೆದರಿಸುವ ಪ್ರಯತ್ನಕ್ಕೆ ಕೈಹಾಕಿದೆ. ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದೆ. ಇದೀಗ ಹಿಜಾಬ್ ವಿಚಾರವಾಗಿ ಆರು ಮಂದಿ ಯುವತಿಯರ ತಲೆ ಕೆಡಿಸಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಇದರ ಹಿಂದೆ ಭಯೋತ್ಪಾದಕ ಶಕ್ತಿ ಇದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!