ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯಿಸಿದ್ದು, ಇಲಾಖೆಯಲ್ಲಿ ಯಾವ ಭ್ರಷ್ಟಾಚಾರ ನಡೆದಿದೆ? ಎಂದು ಪ್ರಶ್ನಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಸಚಿವ ತಿಮ್ಮಾಪುರ, ಯಾವ ಭ್ರಷ್ಟಾಚಾರವೂ ನಡೆದಿಲ್ಲ. ಇದು ರಾಜಕೀಯ ಪ್ರೇರಿತ ಆರೋಪ. ಭ್ರಷ್ಟಾಚಾರ ನಡೆದಿದ್ದರೆ ದೂರು ನೀಡಲಿ ಎಂದಿದ್ದಾರೆ.
ಯಾವ ಅಧಿಕಾರಿಗಳು ಲಂಚ ಪಡೆದಿದ್ದಾರೆ? ಲಂಚ ಪಡೆದ ಅಧಿಕಾರಿಗಳ ಹೆಸರು ಹೇಳಲಿ. ಇಲ್ಲ ಅವರ ಪಟ್ಟಿಯನ್ನು ನನಗೆ ಕಳುಹಿಸಲಿ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಮದ್ಯದಂಗಡಿ ಪರವಾನಗಿ ಲೈಸೆನ್ಸ್ ಎಲ್ಲವೂ ಸರಿ ಇದ್ದರೆ ಯಾರು ಪ್ರಶ್ನೆ ಮಾಡುತ್ತಾರೆ?. ಅಬಕಾರಿ ಇಲಾಖೆಯಲ್ಲಿ ಯಾವ ಭ್ರಷ್ಟಾಚಾರವೂ ನಡೆದಿಲ್ಲ ಎಂದು ತಿಳಿಸಿದ್ದಾರೆ.