ನನಗೆ ಬ್ಯಾಗ್ ತುಂಬಾ ಹಣ ನೀಡಿದರೆ ಅದಾನಿ-ಅಂಬಾನಿ ವಿರುದ್ಧ ಮಾತನಾಡಲ್ಲ: ಕಾಂಗ್ರೆಸ್ ಗೆ ಮುಜುಗರ ತಂದ ಅಧೀರ್ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆ ನಡುವೆ ಅಂಬಾನಿ ಹಾಗೂ ಅದಾನಿ ಹೆಸರು ಉಲ್ಲೇಖಿಸಿ ಬಿಜೆಪಿ ವಿರುದ್ಧ ಮುಗಿ ಬೀಳುವ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.

ಅದಾನಿ ಹಾಗೂ ಅಂಬಾನಿ ನನಗೆ ಬ್ಯಾಗ್ ತುಂಬಾ ಹಣ ನೀಡಿದರೆ ಅವರ ವಿರುದ್ಧ ಮಾತನಾಡಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಧಿರ್ ರಂಜನ್ ಚೌಧರಿ ಹೇಳಿದ್ದು, ಇದೀಗ ಕೋಲಾಹಲ ಸೃಷ್ಟಿಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಅದೀರ್ ರಂಜನ್ ಚೌಧರಿ ಮಾಧ್ಯಮದ ಜೊತೆ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ.

ಅಂಬಾನಿ-ಅದಾನಿಯಿಂದ ಹೆಸರು ಉಲ್ಲೇಖಿಸಿ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ಮಾಡುತ್ತಿರುವ ಆರೋಪಕ್ಕೆ ನಿಮ್ಮ ಉತ್ತರವೇನು ಎಂದು ವರದಿಗಾರ ಅಧೀರ್ ರಂಜನ್ ಚೌಧರಿ ಬಳಿ ಕೇಳಿದ್ದು, ಇದಕ್ಕೆ ಉತ್ತರಿಸಿದ ಅವರು, ಈ ಹಣ ನನಗೆ ನೀಡಿದ್ದರು ಒಳ್ಳೆಯದಿತ್ತು. ಕಾರಣ ನನಗೆ ಹಣದ ಅವಶ್ಯಕತೆ ಇದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ಹಣ ಇಲ್ಲ. ನಾನು ಬಿಪಿಎಲ್ ಕಾರ್ಡ್ ಸಂಸದ ಎಂದು ಹೇಳಿದ್ದಾರೆ.
ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ.ಚುನಾವಣೆ ನಿಲ್ಲಲು ಸಾಕಷ್ಟು ಹಣದ ಅವಶ್ಯಕತೆ ಇದೆ. ಅದಾನಿ-ಅಂಬಾನಿ ಟ್ರಕ್ ತುಂಬಾ ಬೇಡ, ಬ್ಯಾಗ್ ತುಂಬಾ ಹಣ ನೀಡಿದರೆ ನನಗೆ ಸುಲಭಾಗುತ್ತಿತ್ತು ಎಂದಿದ್ದಾರೆ.

ದೇಣಿಗೆ ಪಡೆದಿಲ್ಲವೇ ಅನ್ನೋ ವರದಿಗಾರ ಮರು ಪ್ರಶ್ನೆಗೆ ಉತ್ತರಿಸಿದ ಅಧೀರ್, 47 ವರ್ಷಗಳಿಂದ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಅಧಿಕಾರವಿಲ್ಲದೆ ಹೋರಾಡುತ್ತಿದೆ. ದೇಣಿಗೆ ಯಾರು ನೀಡುತ್ತಿಲ್ಲ ಎಂದಿದ್ದಾರೆ.

ಅದಾನಿ ಅಂಬಾನಿ ವಿರುದ್ಧ ಸಂಸತ್ತಿನಲ್ಲಿ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ಇದೀಗ ಅವರಿಂದ ಹಣ ನಿರೀಕ್ಷಿಸುತ್ತಿದ್ದೀರಾ ಎಂದು ವರದಿಗಾರ ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಅಧೀರ್, ಹೌದು ನಾನು ಕೂಡ ಅದಾನಿ ಅಂಬಾನಿ ವಿರುದ್ಧ ವಾಗ್ದಾಳಿ ನಡೆಸಿದ್ದೇನೆ, ಯಾಕೆಂದರೆ ಅವರು ನಮಗೆ ಹಣ ನೀಡಿಲ್ಲ. ಅಂಬಾನಿ-ಅದಾನಿ ಹಣ ನೀಡಿದರೆ ಮತ್ತೆ ಅವರ ವಿರುದ್ಧ ಮಾತನಾಡವುದಿಲ್ಲ ಎಂದು ಅದೀರ್ ಹೇಳಿದ್ದಾರೆ.

ಅದೀರ್ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಶೆಹಜಾದ್ ಪೂನಾವಲ, ಇದು ಕಾಂಗ್ರೆಸ್ ಪಕ್ಷದ ಅಸಲಿ ಹಫ್ತಾ ವಸೂಲಿ ಮಾದರಿ ಎಂದು ಟೀಕಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!